Advertisement

ಮತದಾರರ ಓಲೈಕೆಗೆ ಬಗೆ ಬಗೆಯ ಆಫರ್‌

04:48 PM Dec 25, 2020 | Suhan S |

ಗದಗ: ಅಕ್ಕಾರ, ಅಣ್ಣಾರ ನಿಮ್ಮ ಮಗ-ಸೊಸೆ ಬೆಂಗಳೂರಿನಲ್ಲಿದ್ದಾರಲ್ಲ ಅವರಿಗೆ ಬಸ್‌ ಟಿಕೆಟ್‌ ಮಾಡಿಸ್ಲೇನ್‌. ಅವರು ಕಾರ್‌ ತಗೊಂಡು ಬರ್ತಾರ ಅಂದ್ರೆ ಪೆಟ್ರೋಲ್‌ ಬಿಲ್‌ ಕೊಡ್ತೇನಿ. ಬಂದ ನಮಗ ಓಟ್‌ ಮಾಡಾಕ್‌ ಹೇಳಿದ ಇದು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ನಡೆಯುತ್ತಿರುವ 2ನೇ ಹಂತದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಹುತೇಕ ಅಭ್ಯರ್ಥಿಗಳು ದೂರದ ಊರುಗಳಿಂದಮತದಾರರನ್ನು ಕರೆತರಲು ಬಗೆ ಬಗೆಯ ಆಫರ್‌ ನೀಡುತ್ತಿರುವ ಪರಿ.

Advertisement

ಹೌದು, ಇತ್ತೀಚೆಗೆ ನಡೆದ ಮೊದಲನೇಹಂತದ ಚುನಾವಣೆಯಲ್ಲಿ ಅಭ್ಯರ್ಥಿಗಳ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇದೇ ಕಾರಣಕ್ಕೆ ಶೇ.79.12 ರಷ್ಟು ಮತದಾನ ದಾಖಲಾಗಿದೆ ಎನ್ನಲಾಗಿದೆ.ಹೀಗಾಗಿ, ಎರಡನೇ ಹಂತದಲ್ಲಿಚುನಾವಣೆ ಎದುರಿಸುತ್ತಿರುವ ಅಭ್ಯರ್ಥಿಗಳು ಎಚ್ಚೆತ್ತುಕೊಂಡಿದ್ದಾರೆ.ಶತಾಯಗತಾಯ ಈ ಬಾರಿ ಗ್ರಾಮ ಪಂಚಾಯತಿ ಪ್ರವೇಶಿಸಬೇಕು ಎಂದು ಪಣತೊಟ್ಟಿರುವ ಅಭ್ಯರ್ಥಿಗಳು ನಾನಾ ರೀತಿಯ ಕಸರತ್ತುಗಳನ್ನು ಆರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ಸ್ಥಳೀಯ ಮತದಾರರ ಓಲೈಕೆಯಲ್ಲಿ ತೊಡಗಿದ್ದ ಅಭ್ಯರ್ಥಿಗಳು,ಇದೀಗ ಬೇರೆ ಬೇರೆ ಊರುಗಳಲ್ಲಿರುವಸ್ಥಳೀಯ ಮತದಾರರನ್ನು ಚುನಾವಣೆಗೆಕರೆಯಿಸುವ ನಿಟ್ಟಿನಲ್ಲಿ ಗಮನ ಹರಿಸಿದ್ದಾರೆ.

ಅತ್ಯಧಿಕ ಮತ ಪಡೆಯುವ ಮೂಲಕ ಚುನಾವಣಾ ಕಣದಲ್ಲಿ ಧೂಳೆಬ್ಬಿಸಲುರಣತಂತ್ರವನ್ನೇ ಹೆಣೆಯುತ್ತಿದ್ದಾರೆ.ಪಕ್ಷ-ನಾಯಕರಿಗೂ ಪ್ರತಿಷ್ಠೆ: ಜಿಲ್ಲೆಯಲ್ಲಿಎರಡು ಹಂತಗಳಲ್ಲಿ ಗ್ರಾ.ಪಂ. ಚುನಾವಣೆನಡೆಯುತ್ತಿದೆ. ಆದರೆ, ಈಗಾಗಲೇಮೊದಲ ಹಂತದಲ್ಲಿ ಮೂರು ತಾಲೂಕಿನ801 ಸ್ಥಾನಗಳಿಗೆ ಚುನಾವಣೆ ನಡೆದಿದ್ದರೆ,2ನೇ ಹಂತದಲ್ಲಿ ನಾಲ್ಕು ತಾಲೂಕಿನ 64ಗ್ರಾ.ಪಂ.ಗಳ 850 ಸ್ಥಾನಗಳಿಗೆ ಲೋಕಲ್‌ ಫೈಟ್‌ ನಡೆಯಲಿದೆ. 49 ಸ್ಥಾನಗಳು ಹೆಚ್ಚಿವೆ. ಅಲ್ಲದೇ, ಮೂರೂ ನಾಲ್ಕೂ ತಾಲೂಕಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇರುವುದು ಆಡಳಿತಾರೂಢ ಬಿಜೆಪಿ ಹಾಗೂವಿಪಕ್ಷ ಕಾಂಗ್ರೆಸ್‌ ನಾಯಕರಿಗೂ ತಮ್ಮಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದುಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ,ಅಭ್ಯರ್ಥಿಗಳಲ್ಲಿ ಬಿಗ್‌ ಫೈಟ್‌ ಏರ್ಪಟ್ಟಿದೆ. ಮುಂಡರಗಿ ತಾಲೂಕಿನ 18 ಗ್ರಾ.ಪಂ.ಗಳ 253 ಸ್ಥಾನಗಳಿಗೆ 702 ಅಭ್ಯರ್ಥಿಗಳುಸ್ಪರ್ಧೆಯಲ್ಲಿ ಉಳಿದಿದ್ದಾರೆ. ನರಗುಂದತಾಲೂಕಿನ 13 ಗ್ರಾ.ಪಂ.ಗಳ 160 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, 378 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ರೋಣ ತಾಲೂಕಿನ 312 ಸ್ಥಾನಗಳಿಗೆ 970 ಅಭ್ಯರ್ಥಿಗಳು ಸಮರ ಸಾರಿದ್ದಾರೆ. ಗಜೇಂದ್ರಗಡ ತಾಲೂಕಿನಒಟ್ಟು 9 ಗ್ರಾ.ಪಂ.ಯ 125 ಸ್ಥಾನಗಳಿಗೆಚುನಾವಣೆ ನಡೆಯಲಿದ್ದು, 181ಅಭ್ಯರ್ಥಿಗಳು ಗೆಲುವಿಗೆ ಸೆಣಸುತ್ತಿದ್ದಾರೆ. ಗ್ರಾಪಂ ಚುನಾವಣೆಯಲ್ಲಿ ಗೆಲುವಿಗಾಗಿ ಹೋರಾಡುತ್ತಿರುವ ಅಭ್ಯರ್ಥಿಗಳು, ಮತದಾನದ ದಿನಾಂಕ ಸಮೀಪಿಸುತ್ತಿದ್ದಂತೆ ಹೊಸ ಹೊಸ ರಾಜಕೀಯ ಪಟ್ಟುಗಳನ್ನು ಹಾಕುತ್ತಿರುವುದು ಸುಳ್ಳಲ್ಲ

850 ಸ್ಥಾನಕ್ಕೆ 2439 ಅಭ್ಯರ್ಥಿಗಳ ಫೈಟ್‌ : ಜಿಲ್ಲೆಯ ಮುಂಡರಗಿ,ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ 2ನೇಹಂತದಲ್ಲಿ ಗ್ರಾ.ಪಂ. ಚುನಾವಣೆನಡೆಯುತ್ತಿದೆ. ಒಟ್ಟು 64 ಗ್ರಾ.ಪಂ. ಗಳ 895 ಸ್ಥಾನಗಳಲ್ಲಿ 9 ಸ್ಥಾನಗಳಿಗೆನಾಮಪತ್ರಗಳುಸಲ್ಲಿಕೆಯಾಗದೇಖಾಲಿ ಉಳಿದಿದ್ದರೆ, 36 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.ಇನ್ನುಳಿದ 850 ಸ್ಥಾನಗಳಿಗೆ ಚುನಾ ವಣೆ ನಡೆಯಲಿದ್ದು, 1144 ಮಹಿಳೆಯರು ಸೇರಿದಂತೆ 2439 ಅಭ್ಯರ್ಥಿಗಳು ಗೆಲುವಿಗಾಗಿ ಸೆಣಸುತ್ತಿದ್ದಾರೆ.

 

Advertisement

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next