Advertisement

130 ಗ್ರಾ.ಪಂ.ಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘ

10:42 PM Dec 01, 2022 | Team Udayavani |

ಉಡುಪಿ : ಸಂಜೀವಿನಿ ಸಂಘಗಳ ಮೂಲಕ ಗ್ರಾ.ಪಂ. ಹಂತದಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ರೂಪಿಸಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿರುವ ನಿಟ್ಟಿನಲ್ಲೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಯುವಕರ ಸಂಘಟನೆ ಜತೆಗೆ ಉದ್ಯೋಗಾವಕಾಶಕ್ಕಾಗಿ ಸ್ವಾಮಿ ವಿವೇಕಾನಂದ ಯುವ ಸಂಘ ರಚಿಸಲು ಸರಕಾರ ಕಾರ್ಯಸೂಚಿ ನೀಡಿದೆ.

Advertisement

ಗ್ರಾ.ಪಂ. ಹಂತಗಳಲ್ಲಿ ಸ್ವಾಮಿ ವಿವೇಕಾನಂದ ಯುವಸಂಘಗಳನ್ನು ರಚಿಸಿ, ಆ ಸಂಘಗಳಿಗೆ ಸರಕಾರ ಅನುದಾನ ನೀಡುವ ಯೋಜನೆಗೆ ಜಿಲ್ಲೆಯಲ್ಲಿ 130 ಗ್ರಾ.ಪಂ.ಗಳಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ.

ಯುವಸಂಘಗಳಿಗೆ ಸರಕಾರದಿಂದ ಪ್ರೋತ್ಸಾಹ ನಿಧಿಗೆ ಸರಕಾರ 10 ಕೋ. ರೂ. ಅನುದಾನವನ್ನು ಬಿಡುಗಡೆಗೊಳಿಸಿದೆ. ಪ್ರತಿ ಸಂಘಕ್ಕೆ 1.5 ಲಕ್ಷ ರೂ.ಗಳಿಂದ 10 ಲಕ್ಷ ರೂ.ವರೆಗೆ ಸಾಲಸೌಲಭ್ಯ ನಿಗದಿಗೊಳಿಸಲಾಗಿದೆ. ಈ ಮೂಲಕ ಯುವಸಂಘಗಳ ಉದ್ದಿಮೆ ಸ್ಥಾಪನೆ, ಜೀವನೋಪಾಯ ಯೋಜನೆಗಳ ಅನುಷ್ಠಾನಕ್ಕೆ ಆರ್ಥಿಕ ನೆರವು ನೀಡಲು ಸರಕಾರ ಮುಂದಾಗಿದೆ.

ಯುವಜನ ಮತ್ತು ಕ್ರೀಡಾ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಇಲಾಖೆ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗಳ ಸಹಯೋಗದಲ್ಲಿ ಯೋಜನೆ ಅನು ಷ್ಠಾನಗೊಂಡಿದೆ. ಈ ಸೌಲಭ್ಯಕ್ಕಾಗಿ ಗ್ರಾ.ಪಂ. ಪಿಡಿಒ, ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಂದ ನಮೂನೆಗೆ ಸಹಿ ಪಡೆದು ಅನಂತರದ ಪ್ರಕ್ರಿಯೆಗಳ ಕುರಿತ ಮಾಹಿತಿ ಪಡೆಯಲು ವ್ಯವಸ್ಥೆ ರೂಪಿಸಲಾಗಿದೆ. ಯುವಸಂಘಗಳ ಗುಂಪುಗಳಿಗೆ ಕೌಶಲಾಭಿವೃದ್ಧಿ, ಉದ್ಯಮಶೀಲತೆ ತರಬೇತಿ ಮತ್ತು ಬ್ಯಾಂಕ್‌ ಸಾಲ ಜೋಡಣೆ ಯೋಜನೆ ಸೌಲಭ್ಯವನ್ನು ಆದ್ಯತೆ ಮೇರೆಗೆ ವಿತರಿಸಲಾಗುತ್ತಿದ್ದು, ಯೋಜನೆಯ 500 ಕೋ. ರೂ., ನಲ್ಲಿ 10 ಕೋ. ರೂ. ಅನುದಾನ ಬಿಡುಗಡೆಗೊಂಡಿದೆ.

ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಯಡಿ 18ರಿಂದ 29ರೊಳಗಿನ ವಯೋಮಾನದ 10ರಿಂದ 20 ಯುವಕರ ಗುಂಪಿನ ಸಂಘ ರಚನೆ ಬಳಿಕ ಆರಂಭಿಕ ಹಂತವಾಗಿ 10 ಸಾವಿರ ರೂ. ಸುತ್ತು ನಿಧಿ ನೀಡಲಾಗುತ್ತದೆ. ಈ ಸಂಘದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಸಂಘದ ರಚನೆ, ಸಾಲ ಸೌಲಭ್ಯ ಬಳಕೆ ಕುರಿತ ವರದಿ ಸಿದ್ಧಪಡಿಸಲು 6 ತಿಂಗಳ ಕಾಲಾವಕಾಶವಿದೆ. ಬಳಿಕ ಆರ್ಥಿಕ ಚಟುವಟಿಕೆಗಳಿಗೆ ಅನುಗುಣವಾಗಿ ಕನಿಷ್ಠ ಕಂತು ರೂಪದ ಮರುಪಾವತಿಗೆ 5ರಿಂದ 7 ವರ್ಷದವರೆಗೆ ಅವಕಾಶ ನೀಡಲಾಗುತ್ತದೆ.

Advertisement

ಯೋಜನೆ ಹೇಗೆ ಸಹಕಾರಿ?
ಗ್ರಾ.ಪಂ. ವ್ಯಾಪ್ತಿ ಯುವ ಸಂಘಗಳು ಯೋಜನೆಯನ್ನು ವ್ಯವಸ್ಥಿತವಾಗಿ ಬಳಸಿಕೊಂಡಲ್ಲಿ ಸೊÌàದ್ಯೋಗ, ಉದ್ಯಮದ ಮೂಲಕ ಜೀವನೋಪಾಯಕ್ಕೆ ಅನುಕೂಲ. ಸ್ಥಳೀಯ ಮಟ್ಟದ ಯುವಕರ ಸ್ಟಾರ್ಟ್‌ಅಪ್‌ಗ್ಳಿಗೆ ಆರ್ಥಿಕ ನೆರವು. ಸ್ಥಳೀಯ ಮಟ್ಟದಲ್ಲಿ ಯೋಜನೆ ಬಗ್ಗೆ ಗ್ರಾ.ಪಂ. ಮೂಲಕ ಅರಿವು ಮೂಡಿಸಲಾಗುತ್ತಿದೆ. ನಿರುದ್ಯೋಗಿ ಯುವಕರು, ಉದ್ದಿಮೆ ಸ್ಥಾಪನೆಯತ್ತ ಆಸಕ್ತ ಗುಂಪುಗಳನ್ನು ರಚಿಸಲು ಮುಂದಾಗುವಂತೆ ಪ್ರೇರೇಪಿಸಲಾಗುತ್ತಿದೆ. ಈ ಯೋಜನೆಯಡಿ ಯುವ ಜನರಿಗೆ ಗುಂಪು ಆಧಾರಿತ ಆರ್ಥಿಕ ಚಟುವಟಿಕೆ ಮೂಲಕ ಸ್ವಯಂ ಉದ್ಯೋಗ ಕಲ್ಪಿಸಲು ಬ್ಯಾಂಕ್‌ ಮೂಲಕ ಸಾಲಸೌಲಭ್ಯ ನೆರವಾಗಲಿದೆ ಎನ್ನುತ್ತಾರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರೋಶನ್‌ ಶೆಟ್ಟಿ.

ಉತ್ತೇಜನ ಕಾರ್ಯ
ಗ್ರಾ.ಪಂ.ಗಳಲ್ಲಿ ಸಂಜೀವಿನಿ ಸಂಘಗಳ ಮಾದರಿಯಲ್ಲೇ ಯುವಕರ ಸ್ವ-ಸಹಾಯ ಸಂಘಗಳನ್ನು ರಚನೆ ಮಾಡಲಾಗುವುದು. ಸೊÌàದ್ಯೋಗ ಸಹಿತ ಸರಕಾರದ ವಿವಿಧ ಪ್ರೋತ್ಸಾಹಕ ಯೋಜನೆಯಡಿ ಈ ಯುವಕ ಸಂಘಗಳಿಗೆ ಉತ್ತೇಜನ ನೀಡಲಾಗುತ್ತದೆ.
– ಪ್ರಸನ್ನ ಎಚ್‌., ಸಿಇಒ, ಜಿ.ಪಂ., ಉಡುಪಿ

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next