Advertisement

ಗ್ರಾಮ ಠಾಣಾ ಆಸ್ತಿ ದಾಖಲೆಗೆ ಸ್ವಮಿತ್ವ ಯೋಜನೆ

03:09 PM Sep 08, 2020 | Suhan S |

ಪಿರಿಯಾಪಟ್ಟಣ: ಗ್ರಾಮಾಂತರ ಪ್ರದೇಶದ ಗ್ರಾಮ ಠಾಣಾ ವ್ಯಾಪ್ತಿಯ ನಿವೇಶನ ಹಾಗೂ ಗ್ರಾಮದ ಒಳಗಿನ ಆಸ್ತಿಗಳಿಗೆ ದಾಖಲೆಗಳಿಲ್ಲದೇ ಜನರಿಗೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಮುಕ್ತಿ ಹಾಡಲು ಕೇಂದ್ರ ಸರ್ಕಾರವು ಸ್ವಮಿತ್ವ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಭೂ ಮಾಪನ ಇಲಾಖೆಯ ಉಪ ನಿರ್ದೇಶಕಿ ರಮ್ಯಾ ತಿಳಿಸಿದರು.

Advertisement

ತಾಲೂಕಿನ ಪುನಾಡಹಳ್ಳಿಯಲ್ಲಿ ಸೋಮವಾರ ಭೂ ಮಾಪನ, ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಮಿತ್ವ ಯೋಜನೆ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿ, ಸರ್ವೆ ಆಫ್ ಇಂಡಿಯಾ ಸಂಸ್ಥೆ, ಕಂದಾಯ ಇಲಾಖೆ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯಡಿ ಡ್ರೋನ್‌ ತಂತ್ರಜ್ಞಾನ ಬಳಸಿಕೊಂಡು ಗ್ರಾಮಠಾಣಾ ಹಾಗೂ ಜಮೀನನ್ನು ಸರ್ವೆ ಮಾಡಲಾಗುವುದು ಎಂದರು.

ಈ ಯೋಜನೆಯ ಪ್ರಾಯೋಗಿಕ ಹಂತವಾಗಿ ರಾಜ್ಯದ 5 ಜಿಲ್ಲೆಗಳ 83 ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಲ್ಲಿ ಮೈಸೂರು ಜಿಲ್ಲೆಯೂ ಒಳಪಟ್ಟಿದ್ದು, ಈಗಾಗಲೇ ನಂಜನಗೂಡಿ ನಲ್ಲಿ ಪ್ರಾರಂಭಿಸಿ, ನಂತರ ಪಿರಿಯಾಪಟ್ಟಣ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಪೈಲಟ್‌ ಯೋಜನೆಯಾಗಿ ಪುಡಾನಹಳ್ಳಿ ಗ್ರಾಮದಲ್ಲಿ ಪ್ರಾರಂಭಿಸಲಾಗಿದೆ. ಮುಂದಿನ ಹಂತದಲ್ಲಿ ಇತರೆ ಗ್ರಾಮಗಳ ಆಸ್ತಿಗಳನ್ನು ಗುರುತಿಸುವ ಮತ್ತು ಡೊ›àನ್‌ ಮೂಲಕ ಛಾಯಾಚಿತ್ರವನ್ನು ಸೆರೆ ಹಿಡಿಯುವ ಕಾರ್ಯವು ಪ್ರಾರಂಭಿಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿನ ಆಸ್ತಿಗಳನ್ನು ಗುರುತಿಸುವ ಕೆಲಸ ಪ್ರಗತಿಯಲ್ಲಿದೆ. ಗ್ರಾಮದಲ್ಲಿ ವಸತಿ ಪ್ರದೇಶದ ಆಸ್ತಿ ಮಾಲೀಕರು ಭೂಮಾಪಕರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಆಸ್ತಿಗಳ ಗಡಿಗಳನ್ನು ಗುರುತಿಸುವಾಗ ಸ್ಥಳದಲ್ಲಿ ಹಾಜರಿದ್ದು, ತಮ್ಮ ಆಸ್ತಿಯ ಗಡಿಗಳನ್ನು ತೋರಿಸಲು ಹಾಗೂ ಆಸ್ತಿಯ ಬಗ್ಗೆ ತಮ್ಮಲ್ಲಿರುವ ದಾಖಲೆಗಳನ್ನು ಸಿಬ್ಬಂದಿ ಕೇಳಿದಾಗ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ಮಹದೇವ್‌ ಮಾತನಾಡಿ, ಬಹಳ ವರ್ಷ ಗಳ ಕಾಲ ತಮ್ಮ ಮನೆಯಲ್ಲಿಯೇ ವಾಸವಿದ್ದರೂ ಮನೆಯ ದಾಖಲೆಗಳಿಲ್ಲದೆ ಜನರಿಗೆ ಬ್ಯಾಂಕ್‌ ಹಾಗೂ ಸಹಕಾರ ಸಂಘಗಳಿಂದ ಸಾಲ ಸೌಲಭ್ಯಗಳು ಸಿಗದೆ ಕಂಗಾಲಾಗಿದ್ದ ಜನತೆಗೆ ಈ ಯೋಜನೆ ಸಹಾಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ಯೋಜನೆಯನ್ನು ಜಾರಿಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಈ ಸಂದರ್ಭದಲ್ಲಿ ತಾಪಂ ಇಒ ಶ್ರುತಿ, ಮಾಜಿ ಶಾಸಕ ಬಸವರಾಜು, ಒಳಚರಂಡಿ ಮತ್ತು ನೀರು ಸರಬರಾಜು ನಿಗಮದ ನಿರ್ದೇಶಕ ಆರ್‌.ಟಿ. ಸತೀಶ್‌, ಎಡಿಎಲ್ ಆರ್‌ ಚಿಕ್ಕಣ್ಣ, ಎಇಇಗಳಾದ ಪ್ರಭು, ಶಿವಕುಮಾರ್‌, ನಾಗರಾಜು, ಬಿಸಿಎಂ ವಿಸ್ತರಣಾಧಿಕಾರಿ ಮೋಹನ್‌ ಕುಮಾರ್‌, ಭೂಮಾಪನ ಸಹಾಯಕ ಎಂ.ಕೆ.ಪ್ರಕಾಶ್‌, ಮುಖಂಡರಾದ ಹೊನ್ನೇಗೌಡ, ರಘುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next