Advertisement

ಹೆಬ್ರಿ ತಾ|: ಬಿಜೆಪಿ ಬೆಂಬಲಿತರ ಜಯಭೇರಿ

11:50 PM Dec 30, 2020 | Team Udayavani |

ಹೆಬ್ರಿ: ತಾಲೂಕಿನ 9 ಗ್ರಾಮ ಪಂಚಾಯತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಜಯಭೇರಿ ಬಾರಿಸಿದ್ದಾರೆ.

Advertisement

ಬಿಜೆಪಿ ಬೆಂಬಲಿತರು 5 ಪಂಚಾಯತ್‌ಗಳಲ್ಲಿ ಮೇಲುಗೈ ಸಾಧಿಸಿದ್ದರೆ, ಕಾಂಗ್ರೆಸ್‌ 1 ಹಾಗೂ ಪಕ್ಷೇತರರು 1 ಪಂಚಾಯತ್‌ನಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಇಲ್ಲಿನ ಪ್ರ. ದರ್ಜೆ ಕಾಲೇಜಿನಲ್ಲಿ ಗ್ರಾ.ಪಂ. ಸಮರದ ಮತ ಎಣಿಕೆ ನಡೆದಿದ್ದು ಅಭ್ಯರ್ಥಿಗಳು, ಬೆಂಬಲಿಗರು, ಜನರಿಗೆ ತೀವ್ರ ಕುತೂಹಲದ ಕೇಂದ್ರವಾಗಿತ್ತು.

ಹೆಬ್ರಿ ತಹಶೀಲ್ದಾರರಾದ ಕೆ.ಪುರಂದರ ಅವರ ನೇತೃತ್ವದಲ್ಲಿ ಬೆಳಿಗ್ಗೆ 8ರಿಂದ ಆರಂಭಗೊಂಡ ಮತ ಎಣಿಕೆ ಕಾರ್ಯ ಮಧ್ಯಾಹ್ನ ತನಕ ವೇಗವನ್ನು ಕಂಡರೂ ಮಧ್ಯಾಹ್ನ ನಂತರ ನಿಧಾನಗತಿಯಿಂದ ನಡೆಯಿತು. ವಿಶೇಷವಾಗಿ ಪೋಲಿಸ್‌ ಭದ್ರತೆಯೊಂದಿಗೆ ಮತ ಎಣಿಕೆ ಕಾರ್ಯ ನಡೆದಿದ್ದು ಮತ ಎಣಿಕೆ ಕೇಂದ್ರದ ಹೊರಭಾಗದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಸಹಸ್ರ ಸಂಖ್ಯೆಯಲ್ಲಿ ಸೇರಿದ್ದರು. ಮತ ಎಣಿಕೆ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್‌ ಹಾಗೂ ಚುನಾವಣ ವೀಕ್ಷಕರಾದ ದಿನೇಶ್‌ ಕುಮಾರ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಯಾರಿಗೆ ಗದ್ದುಗೆ?
– ಮುದ್ರಾಡಿ ಪಂಚಾಯತ್‌ನ 15 ಸ್ಥಾನಗಳನ್ನೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದು ದಾಖಲೆಯಾಗಿದೆ.

– ನಾಡ್ಪಾಲು ಗ್ರಾಮ ಪಂಚಾಯತ್‌ಯಲ್ಲಿ ಕಳೆದ ಅವಧಿಯಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರವಿದ್ದು ಈ ಬಾರಿಯೂ ಗದ್ದುಗೆ ಉಳಿಸಿಕೊಂಡಿದ್ದಾರೆ. 7 ರಲ್ಲಿ 7ಸ್ಥಾನ ಬಿಜೆಪಿ ಬೆಂಬಲಿತರ ಪಾಲಾಗಿದೆ.

Advertisement

– ಕುಚ್ಚಾರು ಗ್ರಾಮ ಪಂಚಾಯತ್‌ಯಲ್ಲಿ ಈ ಸಲ ಪಕ್ಷೇತರರು ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. 11 ಸದಸ್ಯ ಬಲದ ಪಂಚಾಯತ್‌ಯಲ್ಲಿ 5 ಮಂದಿ ಬಿಜೆಪಿ ಬೆಂಬಲಿತರು ಹಾಗೂ 8 ಮಂದಿ ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

– ಮಡಾಮಕ್ಕಿ ಗ್ರಾಮ ಪಂಚಾಯತ್‌ ನ 11 ಸ್ಥಾನಗಳಲ್ಲಿ 6 ಸ್ಥಾನಗಳಲ್ಲಿ ಕಾಂಗ್ರೆಸ್‌ ಬೆಂಬಲಿತರು ವಿಜಯದ ನಗೆ ಬೀರಿದ್ದಾರೆ. 5 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯ ಗಳಿಸಿದ್ದಾರೆ.

– ಹೆಬ್ರಿ ಗ್ರಾ.ಪಂ.ನಲ್ಲಿ 16 ಸ್ಥಾನ ದಲ್ಲಿ 8 ಪಕ್ಷೇತರರು ಗೆಲುವು ದಾಖಲಿಸಿ ದ್ದರೆ, 8 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಜಯ ಗಳಿಸಿ ಸಮಬಲ ಕಾಯ್ದು ಕೊಂಡಿದ್ದಾರೆ.

– ಬೆಳ್ವೆ ಗ್ರಾ.ಪಂ.ನಲ್ಲಿ 18 ಸ್ಥಾನಗಳಲ್ಲಿ 13 ಬಿಜೆಪಿ ಬೆಂಬಲಿತರು, 5 ಕಾಂಗ್ರೆಸ್‌ ಬೆಂಬಲಿತರು ಜಯಗಳಿಸಿದ್ದಾರೆ.

– ವರಂಗ ಗ್ರಾ.ಪಂ.ನ 18 ಸ್ಥಾನಗಳಲ್ಲಿ ಇಬ್ಬರು ಬಿಜೆಪಿ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗಿದ್ದು 14 ಬಿಜೆಪಿ ಬೆಂಬಲಿತರು ಮತ್ತು 4 ಪಕ್ಷೇತರರು ಜಯಸಾಧಿಸಿ¨ªಾರೆ.

– ಶಿವಪುರ ಗ್ರಾಮ ಪಂಚಾಯತ್‌ಯಲ್ಲಿ 13 ಸ್ಥಾನಗಳಲ್ಲಿ 8 ಮಂದಿ ಬಿಜೆಪಿಯ ಬೆಂಬಲಿತರು ಜಯಗಳಿಸಿ ಅಧಿಕಾರ ಉಳಿಸಿಕೊಂಡಿ¨ªಾರೆ. ಪಕ್ಷೇತರರು 5 ಸ್ಥಾನ ಪಡೆದುಕೊಂಡಿದ್ದಾರೆ.

– ಚಾರ ಗ್ರಾ.ಪಂ.ನ 13 ಸ್ಥಾನಗಳಲ್ಲಿ 7ರಲ್ಲಿ ಬಿಜೆಪಿ ಬೆಂಬಲಿತರು, 6 ಮಂದಿ ಪಕ್ಷೇತರರು ಜಯ ಸಾಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next