Advertisement

ಚುನಾವಣೆ: ಆಕಾಂಕ್ಷಿಗಳಲ್ಲಿ ಹೆಚ್ಚಿದ ಉತ್ಸಾಹ

02:05 PM Dec 06, 2020 | Suhan S |

ಅಫಜಲಪುರ: ತಾಲೂಕಿನಲ್ಲೀಗ ಗ್ರಾ.ಪಂ ಚುನಾವಣೆ ಕಾವು ಎದ್ದಿದ್ದು, ಎಲ್ಲ ಕಡೆ ಚುನಾವಣೆಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ.

Advertisement

ತಾಲೂಕಿನ 28 ಗ್ರಾ.ಪಂಗಳಲ್ಲಿ ಚುನಾವಣೆಗಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದ್ದು. 498 ಸದಸ್ಯರ ಹಣೆಬರಹ ನಿರ್ಧಾರವಾಗಲಿದೆ. ಆದರೆ ಆಕಾಂಕ್ಷಿಗಳ ಪಟ್ಟಿ ಮಾತ್ರ ಬೆಳೆಯುತ್ತಲೇ ಇದೆ. ನಾಮಪತ್ರ ಸಲ್ಲಿಸುವ ತನಕ ಯಾರು ಸ್ಪ ರ್ಧಿಸಲಿದ್ದಾರೆ? ಎಷ್ಟು ಜನ ಕಣದಲ್ಲಿ

ಉಳಿಯಲಿದ್ದಾರೆ ಎನ್ನುವುದು ತಿಳಿದುಬರಲಿದೆ. ನಾಮಪತ್ರ ಸಲ್ಲಿಕೆಗೆ ಸಿದ್ಧತೆ: ಗ್ರಾ.ಪಂ ಚುನಾವಣೆ ಪ್ರಯುಕ್ತ ಎಲ್ಲ ಗ್ರಾಮಗಳಲ್ಲಿ ಸಕಲ ಸಿದ್ದತೆ ನಡೆಯುತ್ತಿದೆ. ಹಿರಿಯರು, ಯುವಕರು, ಮಹಿಳೆಯರು ಎಲ್ಲರೂ ತಮ್ಮ ಮೀಸಲು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಕಾತುರರಾಗಿದ್ದಾರೆ. ಕಳೆದ ಎರಡ್ಮೂರು ತಿಂಗಳುಗಳಿಂದಮತದಾರರ ಮನವೊಲಿಕೆ ಕೆಲಸ ನಡೆಯುತ್ತಲೇ ಇತ್ತು. ಈಗ ಅಧಿಕೃತವಾಗಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದರಿಂದ ಸ್ಪರ್ಧಾಳುಗಳಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಅನೇಕ ಕಡೆ ಹೊಲಗದ್ದೆಗಳ ಕೆಲಸ ಬಿಟ್ಟು ಗ್ರಾ.ಪಂ ಚುನಾವಣೆಯ ಸಿದ್ಧತೆಯಲ್ಲಿದ್ದಾರೆ.

ಪಕ್ಷಗಳಿಗೆ ಪ್ರತಿಷ್ಠೆ: ಗ್ರಾ.ಪಂ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಚಿನ್ಹೆಯಡಿ ಚುನಾವಣೆ ನಡೆಯುವುದಿಲ್ಲ. ಆದರೂ ಎಲ್ಲಾ ಪಕ್ಷಗಳಿಗೂ ಚುನಾವಣೆ ಪ್ರತಿಷ್ಠೆಯಾಗಿದೆ. ತಮ್ಮ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಾಗಿ ತೆರೆಮರೆಯ ಕಸರತ್ತು ನಡೆಸಿದ್ದಾರೆ.

ಮತದಾರರ ಮಾಹಿತಿ: ಕಳೆದ ಬಾರಿ ಗ್ರಾ.ಪಂ ಚುನಾವಣೆಯಲ್ಲಿ 147997 ಮತದಾರರಿದ್ದರು. ಈ ಬಾರಿ 162074 ಮತದಾರರು ಆಗಿದ್ದು, 14072 ಮತದಾರರು ಹೆಚ್ಚಳವಾಗಿದ್ದಾರೆ. ಚುನಾವಣೆಗೆ ಸ್ಪರ್ಧಿಸುವುದಕ್ಕಾಗಿ ತಹಶೀಲ್ದಾರ್‌ ಕಚೇರಿಯಿಂದ ಜಾತಿ ಪ್ರಮಾಣ ಪತ್ರ ಪಡದುಕೊಳ್ಳುವುದಕ್ಕಾಗಿ ನೂಕು ನುಗ್ಗಲು ನಡೆಯುತ್ತಿದೆ.

Advertisement

ಹಳ್ಳಿ ಕಟ್ಟೆಗಳಲ್ಲಿ ಚರ್ಚೆ ಜೋರು: ಗ್ರಾ.ಪಂ ಚುನಾವಣೆ ಅಖಾಡ ಸಿದ್ಧವಾಗಿದ್ದು ಗ್ರಾಮೀಣ ಭಾಗದಲ್ಲಿ ದೇವಸ್ಥಾನ ಕಟ್ಟೆ, ಸಮುದಾಯ ಭವನ, ಹೋಟೆಲ್‌, ಟೀ ಅಂಗಡಿ, ಪಾನ್‌ ಶಾಪ್‌ ಸೇರಿದಂತೆ ಸಾರ್ವಜನಿಕರು ಸೇರುವ ಜಾಗಗಳಲ್ಲಿ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಧುಮುಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ತಮ್ಮ ವಾರ್ಡ್‌ನ ಜನರ ಮನ ಗೆಲ್ಲಲು ಅನೇಕ ಕಸರತ್ತು ನಡೆಸಿದ್ದಾರೆ. ಕೆಲವರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಬೆಂಬಲಿತರಾಗಿ ಸ್ಪರ್ಧೆಗೆ ಸಿದ್ಧರಾಗುತ್ತಿದ್ದರೆ, ಇನ್ನೂ ಕೆಲವರು ಸ್ವತಂತ್ರವಾಗಿ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ. ಡಿ.30ರ ವರೆಗೆ ನಾಮಪತ್ರ ಸಲ್ಲಿಕೆ, ಹಿಂಪಡೆದುಕೊಳ್ಳುವುದು, ಪ್ರಚಾರಗಳ ಅಬ್ಬರ ನಡೆಯಲಿದೆ.

ಗ್ರಾ.ಪಂ ಚುನಾವಣೆಯಲ್ಲಿ ಜೆ.ಎಂ. ಕೊರಬು ಫೌಂಡೇಶನ್‌ ಬೆಂಬಲಿಗ ಅಭ್ಯರ್ಥಿಗಳು ಸ್ಪರ್ಧೆಗಿಳಿಯಲಿದ್ದಾರೆ. ಮಾಶಾಳ ಮತ್ತು ಕರ್ಜಗಿಗ್ರಾ.ಪಂಗಳಲ್ಲಿ ಎಲ್ಲ ಸ್ಥಾನಗಳಿಗೂ ಸ್ಪರ್ಧೆ ಮಾಡಲಿದ್ದೇವೆ. ಉಳಿದ ಕಡೆಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದ್ದೇವೆ.  -ಜೆ.ಎಂ. ಕೊರಬು

 

-ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next