Advertisement

ನಾಳೆ ಅಭ್ಯರ್ಥಿಗಳ ಚಿಹ್ನೆ ಹಂಚಿಕೆ

12:47 PM Dec 13, 2020 | Suhan S |

ಧಾರವಾಡ: ಗ್ರಾಪಂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಉಮೇದುವಾರಿಕೆ ಹಿಂಪಡೆಯಲು ನೀಡಿದ ಸಮಯಾವಕಾಶ ಮುಗಿದನಂತರ ಸ್ಪರ್ಧೆ ಇರುವಕ್ಷೇತ್ರಗಳಲ್ಲಿನ ಅಭ್ಯರ್ಥಿಗಳಿಗೆ ಅವರ ಸಮ್ಮುಖದಲ್ಲಿ ಚುನಾವನಾ ಆಯೋಗದ ನಿಯಮಾನುಸಾರ ಡಿ.14ರಂದು ಚುನಾವಣಾಧಿಕಾರಿಗಳು ಚಿಹ್ನೆಗಳನ್ನು ಹಂಚಿಕೆ ಮಾಡುತ್ತಾರೆಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಡಿಸಿ ನಿತೇಶ ಪಾಟೀಲ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಷ್ಟ್ರೀಯ ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆಈಗಾಗಲೇ ಹಂಚಿಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿಹ್ನೆಗಳ ಪೈಕಿ ಯಾವುದಾದರೂ ಒಂದು ಚಿಹ್ನೆಯನ್ನು ಅಭ್ಯರ್ಥಿಗಳು ನಾಮಪತ್ರದಲ್ಲಿ ನಮೂದಿಸಬೇಕು. ಆ ಚಿಹ್ನೆಗಳ ವಿನಃ ಬೇರೆ ಯಾವುದೇ ಚಿಹ್ನೆಯನ್ನು ಯಾವುದೇ ಅಭ್ಯರ್ಥಿಗಳಿಗೆ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಿಯಮ 22ರಂತೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನಾಮಪತ್ರದ ಕ್ರಮಾಂಕ ಅನುಸರಿಸಿಹಂಚಿಕೆ ಮಾಡಲಾಗುತ್ತದೆ. ಆದರೆ ಆ ಮೊದಲು ಯಾವುದೇ ಇಬ್ಬರುಅಭ್ಯರ್ಥಿಗಳು ಒಂದೇ  ಚಿಹ್ನೆಯನ್ನು ಕೋರಿದ್ದಾರೆಯೇಎಂಬುದನ್ನು ಪರಿಶೀಲಿಸಿ, ಒಂದುವೇಳೆ ಯಾವುದೇ ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿದ್ದಲ್ಲಿ ನಿಯಮ 22(5)(ಎ) ಪ್ರಕಾರ ಯಾರಿಗೆ ಆ ಚಿಹ್ನೆಯನ್ನು ನೀಡಬೇಕೆಂಬುದನ್ನು ಚೀಟಿ ಎತ್ತುವ ಮೂಲಕ ತೀರ್ಮಾನಿಸಲಾಗುತ್ತದೆ. ಉಳಿದಅಭ್ಯರ್ಥಿಗಳಿಗೆ ಅವರು ಕೋರಿದ2ನೆಯ ಅಥವಾ 3ನೆಯ ಚಿಹ್ನೆಯನ್ನು ನಿಯಮ 22 ಅನುಸರಿಸಿ ನೀಡಲಾಗುವುದೆಂದು ವಿವರಿಸಿದ್ದಾರೆ.

ಉಮೇದುವಾರರಿಗೆ ಮಂಜೂರು ಮಾಡಿದ ಚುನಾವಣಾ ಚಿಹ್ನೆಯ ಮಾದರಿ ಪ್ರತಿಯನ್ನು ಸ್ಪರ್ಧಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜಂಟನಿಗೆ ನೀಡಿ ಸ್ವೀಕೃತಿ ಪಡೆಯಲಾಗುತ್ತದೆ. ಯಾವುದೇ ಅಭ್ಯರ್ಥಿ ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿ ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿಹ್ನೆಯ ಬಗ್ಗೆ ನಡವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು. ಕ್ಷೇತ್ರವಾರು ಅಂತಿಮ ಕಣದಲ್ಲಿರುವಅಭ್ಯರ್ಥಿಗಳ ಪಟ್ಟಿ ತಯಾರಿಸಿಅವರಿಗೆ ಚುನಾವಣಾ ಚಿಹ್ನೆ ಹಂಚಿಕೆಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ನಿಯಮವನ್ನನುಸರಿಸಿಚುನಾವಣಾ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಚಿಹ್ನೆಯನ್ನು ಹಂಚಿಕೆಮಾಡಬೇಕಿರುವುದರಿಂದ ಇಂತಹ ಎಲ್ಲಾ ಅಭ್ಯರ್ಥಿಯನ್ನು ಕರೆದು ಚಿಹ್ನೆ ಹಂಚಿಕೆ ಮಾಡಬಹುದಾಗಿದೆ.

ಕೊಠಡಿಯಲ್ಲಿ ಸೇರುವ ಅಧಿಕಾರಿ ಮತ್ತು ಅಭ್ಯರ್ಥಿಗಳು ಕೋವಿಡ್‌ ಮುಂಜಾಗೃತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next