Advertisement

ಉಸ್ತುವಾರಿ ಸಚಿವ ಎಸ್. ಅಂಗಾರ ಅವರಿಂದ  ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರಕ್ಕೆ ಚಾಲನೆ

02:47 PM Jan 26, 2022 | Team Udayavani |

ಕಟಪಾಡಿ : ರಾಜ್ಯ ಸರಕಾರದ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರದ ಯೋಜನೆಯನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಉದ್ಯಾವರ ಗ್ರಾಮದಲ್ಲಿ ತೆರೆದುಕೊಂಡ ರೆಹ್ಮಾ ಉದ್ಯಾವರ ಅವರ ಕೇಂದ್ರದಲ್ಲಿ  ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು ಬುಧವಾರ ಚಾಲನೆಯನ್ನು ನೀಡಿದರು.

Advertisement

ಬಳಿಕ ಮಾತನಾಡಿ, ಉಡುಪಿ ಜಿಲ್ಲೆಯ 105 ಗ್ರಾಮಗಳಲ್ಲಿ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಜಿಲ್ಲಾಡಳಿತದಿಂದ ತೆರೆಯಲಾಗಿದೆ. ಗ್ರಾಮಮಟ್ಟದಲ್ಲಿಯೇ ಸರಕಾರದ ಯೋಜನೆಗಳಿಗೆ ಬೇಕಾದ ದಾಖಲಾತಿಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿ ಈ ಕೇಂದ್ರವು ಗ್ರಾಮಕ್ಕೆ ನಂ.1 ಕೇಂದ್ರವಾಗಲಿದ್ದು, ಜನ ಸಾಮಾನ್ಯರ ಕಚೇರಿಯ ಅಲೆದಾಟಕ್ಕೆ ಮುಕ್ತಿ ಹಾಡಲಿದೆ ಎಂದರು.

ಈ ಸಂದರ್ಭ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ನಡೆದ ವರ್ಚವಲ್ ಮೀಟಿಂಗ್ ನ ಲ್ಲಿ ಗಣರಾಜ್ಯೋತ್ಸವ ಶುಭಾಶಯ ವಿನಿಮಯ ಮಾಡಿಕೊಂಡು ಈ ಯೋಜನೆ ಅನುಷ್ಠಾನದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಕಾಪು ಕ್ಷೇತ್ರ ಶಾಸಕ ಲಾಲಾಜಿ ಆರ್ ಮೆಂಡನ್, ಗ್ರಾಮ ಒನ್ ಕಾರ್ಯಪಡೆಯ ಅಧ್ಯಕ್ಷ, ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್, ಅಪರ ಜಿಲ್ಲಾಧಿ ಕಾರಿ ಸದಾಶಿವ ಪ್ರಭು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ವಿಷ್ಣುವರ್ಧನ್, ಮುಖ್ಯಕಾರ್ಯನಿರ್ವಹಣಾಧಿ ಕಾರಿ ನವೀನ್ ಭಟ್, ಇ.ಒ. ವಿವೇಕಾನಂದ ಗಾಂವ್ಕರ್, ಉಡುಪಿ ತಾಲೂಕು ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಕೃಷ್ಣ ಶ್ರೀಯಾನ್, ಸದಸ್ಯರಾದ ಮಿಥೇಶ್ ಸುವರ್ಣ, ನಿತಿನ್ ಜೆ. ಸಾಲ್ಯಾನ್, ಆಶಾ ವಾಸು, ಲಾರೆನ್ಸ್ ಡೇಸಾ, ಅಬಿದ್ ಆಲಿ, ಪಂಚಾಯತ್ ಅಭಿವೃದ್ಧಿ ಅಕಾರಿ ರಮೇಶ್ ಎಚ್.ಆರ್., ಕಾರ್ಯದರ್ಶಿ ಶರೀಫ್ ಸಾಬ್ ನದಾಫ್, ಗ್ರಾಮಕರಣಿಕ ಜಗದೀಶ್ ಬಿ.ಎಮ್., ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next