Advertisement
ಭಗವತೀ ನಗರ, ಬಂಗ್ರಮಂಜೇಶ್ವರ ರಸ್ತೆ, ರೈಲು ನಿಲ್ದಾಣ ರಸ್ತೆ, ಹತ್ತನೇ ಮೈಲು,ಚೆಕ್‌ಪೋಸ್ಟ್ ಪರಿಸರ, ಕುಂಜತ್ತೂರು, ತೂಮಿನಾಡು ಮೊದಲಾದೆಡೆಗಳಲ್ಲಿ ಮಾಲಿನ್ಯರಾಶಿಗಳನ್ನು ಕಾಣಬಹುದಾಗಿದೆ.
Related Articles
ಹಿಂದಿನ ಗ್ರಾಮ ಪಂಚಾಯತ್ ಆಡಳಿತ ಕಾಲದಲ್ಲಿ ಯೋಜನೆಯಲ್ಲಿ ಬಡಾಜೆ ಗ್ರಾಮದ ಕಿಟ್ಟಗುಂಡಿ ಎಂಬಲ್ಲಿ ಒಂದೂವರೆ ಎಕ್ರೆ ಸ್ಥಳದಲ್ಲಿ ಮಾಲಿನ್ಯ ಸಂಸ್ಕರಣ ಘಟಕದ ಕಾಮಗಾರಿ ಕೈಗೊಳ್ಳಲಾಗಿದೆ.ಇದಕ್ಕೆ 25 ಲಕ್ಷ ರೂ ನಿಧಿ ಮಂಜೂರುಗೊಳಿಸಲಾಗಿದೆ. ಇಲ್ಲಿಗೆ ತೆರಳಲು ರಸ್ತೆ , ಮಾಲಿನ್ಯ ಘಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿ ಕಟ್ಟಡಕ್ಕೆ ಪಿಲ್ಲರನ್ನು ನಿರ್ಮಿಸಿದೆ. ಸಂಸ್ಕರಣ ಘಟಕದಲ್ಲಿ ಅಳವಡಿಸಲು ಯಂತ್ರ ತಂದು ,ವಿದ್ಯುತ್ ಸಂಪರ್ಕಕಕ್ಕೆ ಲೈನ್ ಎಳೆಯಲಾಗಿದ್ದರು. ಕೇರಳದ ಕಟ್ಟಡದ ಗುತ್ತಿಗೆದಾರ ಮುಂಗಡ ಹಣ ಪಡೆದು ಪರಾರಿಯಾಗಿ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಈತನ ವಿರುದ್ಧ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗಿದೆ.ಕೆಲವರ ವಿರೋಧ ವ್ಯಕ್ತವಾದ ಬಳಿಕ ಆಡಳಿತ ಇದರತ್ತ ಗಮನ ಹರಿಸಿಲ್ಲವೆಂಬುದಾಗಿ ಪ್ರತಿಪಕ್ಷ ಆರೋಪಿಸುತ್ತಿದೆ.
Advertisement
ಮೇ. 9 ಬೆಳಗ್ಗೆ 7ರಿಂದ 9.30ರ ವರೆಗೆ ತ್ಯಾಜ್ಯ ತೆರವು ಚಟುವಟಿಕೆ ನಡೆಯಲಿದೆ. ಸಂಗ್ರಹಿಸಲಾದ ತ್ಯಾಜ್ಯವನ್ನು ಚೀಮೇನಿಯ ತೋಟಗಾರಿಕೆ ನಿಗಮ, ಪಿಲಿಕೋಡ್ ವಲಯ ಕೃಷಿ ಸಂಶೋಧನೆ ಕೇಂದ್ರ, ಸೀತಾಂಗೋಳಿಯ ಕಿನ್ ಫ್ರಾ ಸಂಸ್ಥೆಗಳ ಸಮೀಪವಿರುವ ಸರಕಾರಿ ಜಾಗದಲ್ಲಿ ಇರಿಸಿ, ನಂತರ ಪರಿಷ್ಕರಣೆ ನಡೆಸಲಾಗುವುದು. ಜಿಲ್ಲಾಧಿಕಾರಿ ಡಾ|ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಈ ಸಂಬಂಧ ವಿಶೇಷ ಆದೇಶ ಹೊರಡಿಸಲಾಗಿದೆ.
ಶುಚಿತ್ವ ಮಿಷನ್ ನ ಮೇಲ್ನೋಟದಲ್ಲಿ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶುಚಿತ್ವ ಕಾರ್ಯಕ್ರಮ ನಡೆಯಲಿದೆ.ಎನ್.ಎಸ್.ಎಸ್., ಯೂತ್ ಕ್ಲಬ್, ನೆಹರೂ ಯುವಕೇಂದ್ರದ ಕಾರ್ಯಕರ್ತರೂ ಈ ಚಟುವಟಿಕೆಗಳಲ್ಲಿ ಭಾಗಿಗಳಾಗುವರು.ಶುಚೀಕರಣ ನಡೆಸುವವರಿಗೆ ಮಾಸ್ಕ್, ಗ್ಲೌಸ್, ಗೋಣಿಚೀಲ ಇತ್ಯಾದಿಗಳನ್ನು ಶುಚಿತ್ವ ಮಿಷನ್ ಒದಗಿಸಲಿದೆ. ಆರೋಗ್ಯ ಸಂರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬಂದಿಗಳು ಜತೆಗಿರುವರು. ರಾಷ್ಟ್ರೀಯ ಹೆದ್ದಾರಿಗಳ ಶುಚೀಕರಣ ಚಟುವಟಿಕೆಗಳ ನಿರೀಕ್ಷಣೆಯ ಹೊಣೆ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಎಂಜಿನಿಯರ್ (ರಸ್ತೆ ವಿಭಾಗ), ಕೆ.ಎಸ್.ಟಿ.ಪಿ.ಹೆದ್ದಾರಿ ಶುಚೀಕರಣದ ಹೊಣೆ ಹರಿತ ಕೇರಳಂ ಜಿಲ್ಲಾ ಸಂಚಾಲಕರಿಗೆ, ಇತರ ಪ್ರಧಾನ ರಸ್ತೆಗಳ ಶುಚೀಕರಣದ ಹೊಣೆ ಪಂಚಾಯತ್ ಡೆಪ್ಯುಟಿ ಡೆ„ರೆಕ್ಟರ್, ಶುಚಿತ್ವಮಿಷನ್ ಜಿಲ್ಲಾ ಸಂಚಾಲಕರಿಗೆ ನೀಡಲಾಗಿದೆ.ಆದರೆ ಇದನ್ನು ಸ್ಥಳೀಯಾಡಳಿತಗಳು ಎಷ್ಟು ಪಾಲಿಸು ವರೆಂಬುದಾಗಿ ಕಾದು ನೋಡಬೇಕಿದೆ. ಪ್ಲಾಸ್ಟಿಕ್ ಸಂಸ್ಕರಣಾ ಘಟಕ
ಕಳೆದ 15 ದಿನಗಳ ಹಿಂದೆ ಮಾಲಿನ್ಯವನ್ನು ತೆರವುಗೊಳಿಸಲಾಗಿದೆ.ರಾತ್ರಿ ಕಾಲದಲ್ಲಿ ಮಾಲಿನ್ಯ ತಂದು ಉಪೇಕ್ಷಿಸುವುದರಿಂದ ಆರೋಪಿಗಳ ಪತ್ತೆ ಹಚ್ಚಲಾಗುವುದಿಲ್ಲ.ಗೇರುಕಟ್ಟೆಯಲ್ಲಿ ನೂತನ ಪ್ಲಾಸ್ಟಿಕ್ ಸಂಸ್ಕರಣಾ ಘಟಕದ ಕಾಮಗಾರಿ ಪೂರ್ಣಗೊಂಡಿದೆ.ಮೇ.23 ರಬಳಿಕ ಉದ್ಘಾಟನೆಗೊಂಡು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹರಿತಸೇನೆಯ ಮೂಲಕ ಇಲ್ಲಿ ಸಂಗ್ರಹಿಸಿ ಸಂಸ್ಕರಿಸಲಾಗುವುದು.
– ಅಬ್ದುಲ್ ಅಜೀಜ್ ಹಾಜಿ, ಅಧ್ಯಕ್ಷರು ಗ್ರಾಮ ಪಂಚಾಯತ್ ನಿರ್ಲಕ್ಷÂವೇ ಕಾರಣ
ಗ್ರಾಮಪಂಚಾಯತ್ ಆಡಳಿತದ ಸ್ವಜನ ಪಕ್ಷಪಾತದಿಂದಾಗಿ ಮಾಲಿನ್ಯ ಸಂಸ್ಕರಣಾ ಘಟಕ ಪುರ್ತಿಯಾಗಿಲ್ಲ.ಆಡಳಿತವು ಸ್ವತ್ಛ ಭಾರತ್ ಯೋಜನೆಗೆ ಸಹಕಾರ ನೀಡದ ಕಾರಣ ಮಾಲಿನ್ಯ ತುಂಬಲು ಕಾರಣವಾಗಿದೆ.ಮಾಲಿನ್ಯ ತೆರವಿನ ವಾಹನ ಲೋಕೋಪಯೋಗಿ ಕಚೇರಿ ಆವರಣದಲ್ಲಿ ತುಕ್ಕು ಹಿಡಿಯುತ್ತಿದೆ.ಆಡಳಿತದ ನಿರ್ಲಕ್ಷ್ಯ ಮಾಲಿನ್ಯ ಸಮಸ್ಯೆಗೆ ಕಾರಣವಾಗಿದೆ.
-ಎಂ.ಹರಿಶ್ಚಂದ್ರ ಮಂಜೇಶ್ವರ ಗ್ರಾಮ ಪಂಚಾಯತ್ ವಿಪಕ್ಷ ಸದಸ್ಯರು