Advertisement

Gram panchayat: ಸ್ಥಾನ ಬಿಟ್ಟುಕೊಡದ ಉಪಾಧ್ಯಕ್ಷೆ ವಿರುದ್ದ ಕೆಂಡಾಮಂಡಲಳಾದ ಸದಸ್ಯೆ

08:22 PM Oct 03, 2024 | Team Udayavani |

ಮುಧೋಳ: ಹಿಂದೆ ನಡೆದಿರುವ ಮಾತುಕತೆಯಂತೆ ತನಗೆ ಉಪಾಧ್ಯಕ್ಷೆ ಸ್ಥಾನ ಬಿಟ್ಟುಕೊಡದ ಪರಿಣಾಮ ಗ್ರಾಮ ಪಂಚಾಯಿತಿ‌ ಕಚೇರಿಯಲ್ಲಿಯೇ ಉಪಾಧ್ಯಕ್ಷೆ ಸ್ಥಾನದ ಆಕಾಂಕ್ಷಿ‌ ಪ್ರಸ್ತುತ ಉಪಾಧ್ಯಕ್ಷೆಯ ವಿರುದ್ದ ಹರಿಹಾಯ್ದಿದ್ದಾರೆ.

Advertisement

ತಾಲೂಕಿನ‌ ಹಲಗಲಿ ಗ್ರಾಮ ಪಂಚಾಯಿತಿಯ ಬಿಜೆಪಿ ಬೆಂಬಲಿತ ಸದಸ್ಯೆ ರೇಣುಕಾ‌ ಕುಂದರಗಿ ಉಪಾಧ್ಯಕ್ಷರಾಗಿದ್ದಾರೆ. ಆದರೆ ಗ್ರಾಮದಲ್ಲಿನ ಪಕ್ಷದ ಮುಖಂಡರ ಸಮ್ಮುಖದಲ್ಲಿ ಒಂಭತ್ತು ತಿಂಗಳ ಅವಧಿ ಬಳಿಕ ಉಪಾಧ್ಯಕ್ಷ ಸ್ಥಾನವನ್ನು ಸದಸ್ಯೆ ಭರಮವ್ವ ಕೋಲೂರ ಅವರಿಗೆ ಬಿಟ್ಟು ಕೊಡಬೇಕಾಗಿತ್ತು. ಆದರೆ ರೇಣುಕಾ ಅವರು ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದ ಪರಿಣಾಮ ಭರಮವ್ವ ಕೋಲೂರ ಅವರು ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಉಪಾಧ್ಯಕ್ಷೆಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.

ಅಧ್ಯಕ್ಷ ವೀರಪ್ಪ ಚಿಕ್ಕೂರ ಅವರ ಸಮ್ಮುಖದಲ್ಲಿಯೇ ಮಹಿಳಾ ಸದಸ್ಯರ ವಾಗ್ವಾದ ನಡೆಸುತ್ತಿದ್ದರೂ ಯಾರು ತುಟಿ ಬಿಚ್ಚದೆ ಕುಳಿತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ‌ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next