Advertisement

ಗ್ರಾಪಂ ಅವ್ಯವಹಾರ ತನಿಖೆಗೆ ಒತ್ತಾಯ

01:08 PM Nov 27, 2021 | Team Udayavani |

ಅಫಜಲಪುರ: ತಾಲೂಕಿನ ಚವಡಾಪುರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಹಾಗೂ ಕೋವಿಡ್‌ ಹೆಸರಿನಲ್ಲಿ ಅವ್ಯವಹಾರ ನಡೆದಿದೆ ಎಂದು ಜೆಡಿಎಸ್‌ ಕಾರ್ಯಕರ್ತರು ಆರೋಪಿಸಿ ತನಿಖೆಗೆ ಒತ್ತಾಯಿಸಿದರು.

Advertisement

ಈ ಕುರಿತು ಜೆಡಿಎಸ್‌ ತಾಲೂಕು ಜಮೀಲ್‌ ಗೌಂಡಿ, ಮುಖಂಡ ಅಮರಸಿಂಗ್‌ ರಜಪೂತ ಮಾತನಾಡಿ, ಚವಡಾಪುರ ಗ್ರಾ.ಪಂ ಅದ್ಯಕ್ಷ ಹಾಗೂ ಪಿಡಿಒ ಸೇರಿಕೊಂಡು ನರೇಗಾ ಯೋಜನೆಯಡಿಯಲ್ಲಿ ಲಕ್ಷಾಂತರ ರೂ. ಬೋಗಸ್‌ ಬಿಲ್‌ ಸೃಷ್ಟಿಸಿ, ಗ್ರಾ.ಪಂ ಕಾರ್ಯಾಲಯಕ್ಕೆ ಹೊಸ ಶೌಚಾಲಯ ಕಟ್ಟಿಸಿದ್ದಾಗಿ ಸುಳ್ಳು ಮಾಹಿತಿ ನೀಡಿ 50 ಸಾವಿರ ರೂ., ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಶೌಚಾಲಯ ಕಟ್ಟಿಸಿದ್ದಾಗಿ ಸುಳ್ಳು ಹೇಳಿ 50 ಸಾವಿರ ರೂ., ಸರ್ಕಾರಿ ಶಾಲೆಗೆ ಶೌಚಾಲಯ ಕಟ್ಟಿಸಿದ್ದಾಗಿ ಹೇಳಿ 50 ಸಾವಿರ ರೂ. ಲಪಟಾಯಿಸಿದ್ದಾರೆ ಎಂದು ದೂರಿದರು.

ಗ್ರಾಮದಲ್ಲಿ ಸ್ಯಾನಿಟೈಸರ್‌, ಮಾಸ್ಕ್ ವಿತರಣೆ, ಸ್ವತ್ಛತೆಗಾಗಿ 6.5 ಲಕ್ಷ ರೂ. ಖರ್ಚು ತೋರಿಸಲಾಗಿದೆ. ಆದರೆ ಯಾರೊಬ್ಬರಿಗೂ ಸ್ಯಾನಿಟೈಸರ್‌ ನೀಡಿಲ್ಲ ಎಂದು ಆಪಾದಿಸಿದರು.

ಮುಖಂಡರಾದ ಶ್ರೀಕಾಂತ ದಿವಾನಜಿ, ರಾಜು ಜಮಾದಾರ ಗ್ರಾ.ಪಂ ಸದಸ್ಯ ಶರಣಪ್ಪ ಕಲಕೇರಿ, ಮುಖಂಡರಾದ ಸಾಯಬಣ್ಣ ಜಮಾದಾರ, ಮಾಜಿ ಸೈನಿಕ ಬಸವರಾಜ ಜಮಾದಾರ, ಕಲ್ಯಾಣಿ ಗಂಡೋಳಿ, ಮಾಂತು ಸಪ್ಪನಗೋಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next