Advertisement
ದಾಸ್ತಾನು ಮಾಡದಿದ್ದರೂ ತೊಂದರೆದಾಸ್ತಾನು ಹಂತದಲ್ಲಿ ಈ ಕೀಟಗಳ ಹಾವಳಿ ತೀವ್ರವಾಗುತ್ತದೆ. ಸಾಮಾನ್ಯವಾಗಿ ಈ ಕೀಟಗಳು ದ್ವಿದಳ ಧಾನ್ಯಗಳು ಕೊಯಾಗುವ ಮೊದಲೇ ದಾಳಿ ಇಡುತ್ತವೆ. ಇವುಗಳ ಆಕ್ರಮಣಕ್ಕೆ ತುತ್ತಾದ ಧಾನ್ಯಗಳನ್ನೇ ಸಂಗ್ರಹಿಸುವುದರಿಂದ ಇವುಗಳ ಬೆಳವಣಿಗೆ ನಿರಾತಂಕವಾಗಿ ಸಾಗುತ್ತದೆ. ಇದಕ್ಕೆ ಕಾರಣ, ಕಳೆದ ಬಾರಿ ಉಪಯೋಗಿಸಿದ ಚೀಲಗಳು, ಕಣಜಗಳಲ್ಲಿ ಚಿಪ್ಪುಹುಳುಗಳು ಸುಪ್ತಾವಸ್ಥೆಯಲ್ಲಿರುವುದು ಗೊತ್ತಾಗದೆ, ಇವುಗಳಿರುವ ಚೀಲಗಳನ್ನು ಉಪಯೋಗಿಸಿದಾಗ ಮತ್ತೆ ಕೀಟಬಾಧೆ ಆರಂಭ. ಸಂಗ್ರಹಣೆಯಲ್ಲಿ ಉಂಟಾಗುವ ಇಂಥ ತೊಡಕಿನಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದಲೇ ಬಹಳಷ್ಟು ರೈತರು ಧಾನ್ಯ ದಾಸ್ತಾನು ಮಾಡಲು ಹೋಗುವುದಿಲ್ಲ. ಆಯಾ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಗೆ ಮಾರಿಬಿಡುತ್ತಾರೆ. ಮಾರುಕಟ್ಟೆಗೆ ಒಮ್ಮೆಲೇ ಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಹೋದಾಗ ಬೆಲೆಯನ್ನೂ ಕಡಿಮೆ ನಿಗದಿ ಪಡಿಸಲಾಗುತ್ತದೆ. ಇದರಿಂದ ನಷ್ಟ ವಾ ಗು ವುದು ರೈತರಿಗೇ.
ಇಂಥ ಪರಿಸ್ಥಿತಿ ನಿವಾರಿಸುವುದು ಅಗತ್ಯ. ಇದಕ್ಕಾಗಿ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳಬೇಕು. ಧಾನ್ಯಗಳನ್ನು ಒಕ್ಕಣೆ ಮಾಡಿದ ತಕ್ಷಣವೇ ಅವುಗಳಲ್ಲಿರುವ ಕೀಟಗಳನ್ನು ನಾಶಗೊ ಳಿಸಬೇಕು. ಕಟಾವಾದ ತಕ್ಷಣ ಮೂಟೆ ಕಟ್ಟಿ ಇಟ್ಟರೆ ಕೀಟಗಳಿಗೆ ಅವಕಾಶ ಒದಗಿಸಿಕೊಟ್ಟಂತೆ. ಆದ್ದರಿಂದ, ಧಾನ್ಯಗಳ ತೇವಾಂಶ ಕಡಿಮೆ ಮಾಡಲು ಬಿಸಿಲಿನಲ್ಲಿ ಒಣಗಿಸಬೇಕು. ಕನಿಷ್ಠ 5ರಿಂದ 6 ದಿನ ಒಣಗಿಸಿದರೆ ಕೀಟಗಳು, ಮೊಟ್ಟೆಗಳು ನಾಶವಾಗುತ್ತವೆ. ಸಿಮೆಂಟ್‌ನಿಂದ ಮಾಡಿದ ಕಣದಲ್ಲಿ ಒಣಗಿಸುವುದು ಸೂಕ್ತ. ಒಣಗಿದ ಹಂತದಲ್ಲಿ ಪ್ರತಿದಿನ ಸಂಜೆ ಧಾನ್ಯಗಳನ್ನು ಗಾಳಿ ಸೇರದಂತೆ ಲೋಹದ ಅಥವಾ ಪ್ಲಾಸ್ಟಿಕ್‌ನ ದೊಡ್ಡ ಬ್ಯಾರೆಲ್‌ಗಳಲ್ಲಿ ಸಂಗ್ರಹಿಸಬೇಕು. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಧಾನ್ಯಗಳನ್ನು ಮಾತ್ರ ಸಂಗ್ರಹಣೆ ಮಾಡಬೇಕು. ಧಾನ್ಯದ ಮೇಲೆ ಮರಳನ್ನು ತುಂಬಬೇಕು. ನಂತರ ಭದ್ರವಾಗಿ ಬ್ಯಾರೆಲ್ ಮುಚ್ಚಬೇಕು. - ಕುಮಾರ ರೈತ