ಶಿವಮೊಗ್ಗ: ಗೋಡೆಬರಹ ಬರೆಯುವಂತವರು ಹೇಡಿಗಳು. ಪಿಎಫ್ಐನವರು ಎಂದೂ ಮುಂದೆ ಬಂದು ಏನೂ ಮಾಡಲ್ಲ. ರಾತ್ರಿ ಬಂದು ಚಾಕು ಹಾಕುವುದು, ಬಾಂಬ್ ಹಾಕುವುದು ಮಾಡುತ್ತಿದ್ದಾರೆ. ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡುತಿದ್ದಾರೆ. ಆರಂಭದಿಂದಲೂ ಹೇಡಿ ಕೆಲಸವನ್ನು ಪಿಎಫ್ಐ ಮಾಡುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಗೋಡೆಬರಹ ಬರೆಯುವಂತವರು ಹೇಡಿಗಳು. ಪಿಎಫ್ಐನವರು ಎಂದೂ ಮುಂದೆ ಬಂದು ಏನು ಮಾಡಲ್ಲ. ರಾತ್ರಿ ಬಂದು ಚಾಕು ಹಾಕುವುದು, ಬಾಂಬ್ ಹಾಕುವುದು ಮಾಡುತ್ತಿದ್ದಾರೆ. ದೇಶದಲ್ಲಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡುತಿದ್ದಾರೆ. ಆರಂಭದಿಂದಲೂ ಹೇಡಿ ಕೆಲಸವನ್ನು ಪಿಎಫ್ ಐ ಮಾಡುತ್ತಿದೆ ಎಂದರು.
ಹಿಂದಿನಿಂದ ದೇಶದಲ್ಲಿ ಪಿಎಫ್ಐ ಅನ್ನು ಪೋಷಿಸಿಕೊಂಡು ಕಾಂಗ್ರೆಸ್ ಬರುತ್ತಿತ್ತು. ದೇಶದ ಬಗ್ಗೆ ಪಿಎಫ್ಐಗೆ ಕಲ್ಪನೆಯೇ ಇಲ್ಲ. ಅಭಿವೃದ್ಧಿ ಬಗ್ಗೆ ಕಲ್ಪನೆಯೇ ಇಲ್ಲ. ಪ್ರಪಂಚದಲ್ಲಿ ಭಾರತದ ಹಿಂದುತ್ವ ಅಳಿಸಬೇಕು ಎಂದು ಪಿಎಫ್ ಐ ದೇಶದ್ರೋಹಿ ಕೆಲಸ ಮಾಡುತ್ತಿದೆ. ಪಿಎಫ್ ಐ ದೇಶದ್ರೋಹಿ ಕೆಲಸ ಬೆಂಬಲಿಸುತ್ತಾ ಬರುತ್ತಿದ್ದರು ಎಂದರು.
ನರೇಂದ್ರ ಮೋದಿ, ಅಮಿತ್ ಶಾ ಅಂತಹ ಹುಲಿಗಳು ಇಲಿಗಳ ರೂಪದಲ್ಲಿರುವ ಪಿಎಫ್ಐ ಅನ್ನು ಹೊಸಕಿ ಹಾಕಿದೆ. ಸ್ವಾತಂತ್ರ ಬಂದ ಬಳಿಕ ಕಾಂಗ್ರೆಸ್ ನವರು ಪಿಎಫ್ಐ ಅನ್ನು ಸಾಕುತ್ತಾ ಬಂದರು. ಪಿಎಫ್ಐ ನವರು ಗೋಹತ್ಯೆ, ಗೋ ಕಳ್ಳತನ ಮಾಡುತ್ತಿದ್ದರು. ಅತ್ಯಾಚಾರ ನಡೆಸುತ್ತಿದ್ದರು. ಇದನ್ನೇ ಮುಂದುವರಿಸುತ್ತಿದ್ದೇವೆ ಎಂದು ತೋರಿಸಲು ಅಲ್ಲೊಂದು ಇಲ್ಲೊಂದು ಹೇಡಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಥ ಚಟುವಟಿಕೆಗಳನ್ನು ಮಟ್ಟ ಹಾಕುತ್ತದೆ ಎಂದು ಈಶ್ವರಪ್ಪ ಹೇಳಿದರು.