Advertisement

ಲಂಕಾ: ನೂತನ ಕ್ರಿಕೆಟ್‌ ಆಯ್ಕೆ ಸಮಿತಿ

12:03 PM Sep 20, 2017 | Team Udayavani |

ಕೊಲಂಬೊ: ಶ್ರೀಲಂಕಾ ಕ್ರಿಕೆಟಿನ ನೂತನ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಮಂಗಳವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ. ಮಾಜಿ ಕ್ರಿಕೆಟಿಗ ಗ್ರೇಮ್‌ ಲಾಬ್ರೂಯ್‌ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಭಾರತದೆದುರಿನ ಕಳೆದ ತವರಿನ ಸರಣಿಯಲ್ಲಿ ಶ್ರೀಲಂಕಾ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಸನತ್‌ ಜಯಸೂರ್ಯ ನೇತೃತ್ವದ ಆಯ್ಕೆ ಸಮಿತಿ ರಾಜೀನಾಮೆ ಸಲ್ಲಿಸಿತ್ತು. ನೂತನ ಆಯ್ಕೆ ಸಮಿತಿಯ ಉಳಿದ ಸದಸ್ಯರೆಂದರೆ ಗಾಮಿನಿ ವಿಕ್ರಮ ಸಿಂಘೆ, ಜೆರಿಲ್‌ ವೂಟರ್, ಅಸಂಕಾ ಗುರುಸಿನ್ಹ ಮತ್ತು ಸಜಿತ್‌ ಫೆರ್ನಾಂಡೊ. ಇವರಲ್ಲಿ ಗುರುಸಿನ್ಹ ಶ್ರೀಲಂಕಾ ತಂಡದ ಮ್ಯಾನೇಜರ್‌ ಕೂಡ ಆಗಿದ್ದಾರೆ.

Advertisement

53ರ ಹರೆಯದ ಗ್ರೇಮ್‌ ಲಾಬ್ರೂಯ್‌ 1986-1992ರ ಅವಧಿಯಲ್ಲಿ ಶ್ರೀಲಂಕಾ ಪರ 9 ಟೆಸ್ಟ್‌ ಹಾಗೂ 44 ಏಕದಿನ ಪಂದ್ಯಗಳನ್ನಾಡಿದ್ದಾರೆ. ಮಧ್ಯಮ ವೇಗಿಯಾಗಿದ್ದ ಅವರು ಕ್ರಮವಾಗಿ 27 ಹಾಗೂ 45 ವಿಕೆಟ್‌ ಉರುಳಿಸಿದ್ದಾರೆ. “ನನಗೆ ಈ ಮೊದಲು 4 ಸಲ ಆಯ್ಕೆ ಸಮಿತಿ ಸೇರುವಂತೆ ಮಂಡಳಿ ಕೇಳಿಕೊಂಡಿತ್ತು. ಆದರೆ 4 ಸಲವೂ ನಾನು ಈ ಆಹ್ವಾನವನ್ನು ನಿರಾಕರಿಸಿದ್ದೆ. ಈ ಸಲ ಒಪ್ಪಿದೆ. ಯಾರಾದರೂ ಇದನ್ನು ನಿಭಾಯಿಸಬೇಕಿತ್ತು. ಈ ಅವಕಾಶ ನನ್ನದೇ ಆಗಲಿ ಎಂಬ ನಿರ್ಧಾರಕ್ಕೆ ಬಂದೆ’ ಎಂಬುದಾಗಿ ಲಾಬ್ರೂಯ್‌ ಪ್ರತಿಕ್ರಿಯಿಸಿದ್ದಾರೆ. 

ಲಾಬ್ರೂಯ್‌ ಆಯ್ಕೆಗೆ ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಕಾರ್ಯದರ್ಶಿ ಮೋಹನ್‌ ಡಿ’ಸಿಲ್ವ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next