Advertisement

ಪದವೀಧರ ಕ್ಷೇತ್ರ ಚುನಾವಣೆ: ಸಂಕನೂರ್, ಎಚ್.ಕೆ ಪಾಟೀಲ್ ಮತದಾನ

12:28 PM Oct 28, 2020 | Mithun PG |

ಗದಗ:  ಕರ್ನಾಟಕ ವಿಧಾನ ಪರಿಷತ್  ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಎಸ್.ವಿ. ಸಂಕನೂರ ಮತ ಚಲಾಯಿಸಿದರು. ಪುತ್ರ, ಸೊಸೆಯೊಂದಿಗೆ ನಗರದ  ಮುನ್ಸಿಪಲ್ ಕಾಲೇಜಿಗೆ ಆಗಮಿಸಿದ ಸಂಕನೂರ್,  ಮತಗಟ್ಟೆ ಸಂಖ್ಯೆ 57 ರಲ್ಲಿ ಹಕ್ಕು ಚಲಾಯಿಸಿದರು.

Advertisement

ಹುಲಕೋಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಮಾಜಿ ಸಚಿವ ಎಚ್‌.ಕೆ‌. ಪಾಟೀಲ್ ಮತ ಹಾಕಿದರು. ವಿಧಾನ ಪರಿಷತ್ ಪದವೀಧರ ಕ್ಷೇತ್ರ ವ್ಯಾಪ್ತಿಯ ಗದಗ ಜಿಲ್ಲೆಯಲ್ಲಿ ಒಟ್ಟು 15,978 ಪದವೀಧರ ಮತದಾರರಿದ್ದು, 29 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ಇದನ್ನೂ ಓದಿ: ಪಶ್ಚಿಮ ಪದವೀಧರ ಕ್ಷೇತ್ರ: ಅಪಘಾತವಾಗಿದ್ದರೂ, ಆ್ಯಂಬುಲೆನ್ಸ್ ನಲ್ಲಿ ಬಂದು ಮತಹಾಕಿದ ವ್ಯಕ್ತಿ

ಇದನ್ನೂ ಓದಿ: ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಚುನಾವಣೆ ಮುಂದೂಡುವುದು ಒಳಿತು :ಸಚಿವ ಸುಧಾಕರ್

Advertisement

ಕೊಪ್ಪಳದಲ್ಲಿ ಬೆಳಗ್ಗೆ 10 ಗಂಟೆ ವೇಳೆಗೆ ಶೇ.9.10 ಮತದಾನ

ಕೊಪ್ಪಳ ಜಿಲ್ಲೆಯಲ್ಲಿ  ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಬಿರುಸುಗೊಂಡಿದ್ದು, ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ 10 ರ ವರೆಗೆ ಶೇ.9.10 ಆಗಿದೆ. ಜಿಲ್ಲೆಯಲ್ಲಿ ಒಟ್ಟು 2539 ಮತದಾರರಿದ್ದಾರೆ. ಜಿಲ್ಲಾಡಳಿತ ಒಟ್ಟು 20 ಮತ ಕೇಂದ್ರಗಳನ್ನು ಗುರುತು ಮಾಡಿ ಮತದಾನ ಪ್ರಕ್ರಿಯೆ ಆರಂಭಿಸಿದೆ. ಶಿಕ್ಷಕರು ನಿಧಾನವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ ತೆರಳುತ್ತಿದ್ದಾರೆ. ಜಿಲ್ಲಾಡಳಿತ ಎಲ್ಲಾ ಮತಗಟ್ಟೆಗಳಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಿದೆ.

ಇದನ್ನೂ ಓದಿ: ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತದಾನ ಪ್ರಕ್ರೀಯೆ ಆರಂಭ! ಶೇ.9ರಷ್ಟು ಮತದಾನ

Advertisement

Udayavani is now on Telegram. Click here to join our channel and stay updated with the latest news.

Next