Advertisement

ಆರಂಭದಲ್ಲೇ ವಿಳಂಬ:ಪದವಿ ಪ್ರಥಮ ಸೆಮಿಸ್ಟರ್‌ ಒಂದೆರಡು ವಾರಗಳ ಬಳಿಕ; ಉಳಿದವು ಇಂದಿನಿಂದ

11:58 PM Sep 30, 2021 | Team Udayavani |

ಬೆಂಗಳೂರು: ಪದವಿ ಕಾಲೇಜುಗಳ ಪ್ರಥಮ ವರ್ಷದ ವಿದ್ಯಾರ್ಥಿಗಳು ಕಾಲೇಜು ಮೆಟ್ಟಿಲು ಏರಲು ಇನ್ನೂ ಒಂದೆರಡು ವಾರ ಕಾಯಬೇಕು. ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳದ್ದರಿಂದ ತರಗತಿ ಆರಂಭ ಒಂದು ಅಥವಾ ಎರಡು ವಾರ ವಿಳಂಬವಾಗಲಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಳಿದ ಸೆಮಿಸ್ಟರ್‌ ತರಗತಿಗಳು ಶುಕ್ರವಾರದಿಂದ ಆರಂಭವಾಗಲಿವೆ.

Advertisement

2021-22ನೇ ಸಾಲಿನ ಶೈಕ್ಷಣಿಕ ತರಗತಿಗಳು ಅ. 1ರಿಂದ ಆರಂಭವಾಗಲಿವೆ ಎಂದು ರಾಜ್ಯ ಸರಕಾರ ಈ ಹಿಂದೆ ಘೋಷಿಸಿತ್ತು. ವಿಶ್ವವಿದ್ಯಾನಿಲಯಗಳಿಗೆ ಶೈಕ್ಷಣಿಕ ಕ್ಯಾಲೆಂಡರ್‌ ನೀಡಲಾಗಿತ್ತು. ಕೊರೊನಾ ಮತ್ತು ಇತರ ಕಾರಣ ಗಳಿಂದ ಪದವಿಯ ವಿವಿಧ ಪರೀಕ್ಷೆಗಳು ವಿಳಂಬವಾಗಿದ್ದವು. ಜತೆಗೆ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಅ. 15ರ ವರೆಗೆ ನಡೆಸಲು ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಹೀಗಾಗಿ ತರಗತಿಗಳು ಸ್ವಲ್ಪ ವಿಳಂಬವಾಗಿ ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.

ತೃತೀಯ ಮತ್ತು ಐದನೇ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗಿವೆ. ಈ ತರಗತಿಗಳ ಬಹುತೇಕ ವಿದ್ಯಾರ್ಥಿಗಳು ಕೊರೊನಾ ಲಸಿಕೆ ಪಡೆದಿದ್ದಾರೆ. ಬೋಧಕ, ಬೋಧಕೇತರ ಸಿಬಂದಿಯೂ ಲಸಿಕೆ ಪಡೆದಿರುವುದರಿಂದ ಭೌತಿಕ ತರಗತಿ ನಡೆಸಲು ಸಮಸ್ಯೆಯಿಲ್ಲ. ಹೀಗಾಗಿ 2ನೇ ವರ್ಷ (3ನೇ ಸೆಮಿಸ್ಟರ್‌) ಮತ್ತು 3ನೇ ವರ್ಷ (5ನೇ ಸಮಿಸ್ಟರ್‌) ವಿದ್ಯಾರ್ಥಿಗಳಿಗೆ ಬಹುತೇಕ ವಿ.ವಿ.ಗಳು ಅ. 1ರಿಂದ ತರಗತಿ ಆರಂಭಿಸಲಿವೆ.

ಆಯಾ ವಿ.ವಿ. ನಿರ್ಧಾರ:

2021-22ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನು ಷ್ಠಾನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಥಮ ಸೆಮಿಸ್ಟರ್‌ ವಿದ್ಯಾರ್ಥಿ ಗಳಿಗೆ ಯಾವ ರೀತಿಯಲ್ಲಿ ಕೋರ್ಸ್‌ಗಳು ಇರಲಿವೆ ಮತ್ತು ಪಠ್ಯಕ್ರಮ ಹೇಗಿರಬೇಕು ಎಂಬ ವಿಚಾರದಲ್ಲಿ 10ಕ್ಕೂ ಅಧಿಕ ಮಾದರಿಗಳನ್ನು ಸಿದ್ಧಪಡಿಸಿ, ವಿ.ವಿ.ಗಳಿಗೆ ಕಳುಹಿಸಿದ್ದೇವೆ. ವಿ.ವಿ.ಗಳು ತಮಗೆ ಅಗತ್ಯವಾದ ಮಾದರಿಯನ್ನು ಅಳವಡಿಸಿಕೊಳ್ಳಲಿವೆ. ಪ್ರಥಮ ವರ್ಷದ ತರಗತಿ ಆರಂಭಿಸುವ ಅಧಿಕಾರವನ್ನು ವಿ.ವಿ.ಗಳಿಗೆ ನೀಡಿದ್ದೇವೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಹೇಳಿದ್ದಾರೆ.

Advertisement

ದಾಖಲಾತಿ ನಡೆಯುತ್ತಿದೆ:

ಸರಕಾರಿ ಪದವಿ ಕಾಲೇಜುಗಳಲ್ಲಿ ದಾಖಲಾತಿ ನಡೆಯುತ್ತಿದೆ. 2020-21ನೇ ಸಾಲಿನಲ್ಲಿ ದ್ವಿತೀಯ ಪಿಯುಸಿಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಯಾಗಿರುವುದರಿಂದ ದಾಖಲಾತಿ ಹೆಚ್ಚಾಗಿದೆ. ಸುಮಾರು 2 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಪದವಿಗೆ ಸೇರಲಿದ್ದಾರೆ. ಹೀಗಾಗಿ ತರಗತಿ ಆರಂಭ ವಿಳಂಬವಾಗುತ್ತಿದೆ. ಉಳಿದ ಸೆಮಿಸ್ಟರ್‌ಗಳಿಗೆ ನಿರ್ದಿಷ್ಟ ವೇಳಾಪಟ್ಟಿಯಂತೆ ತರಗತಿ ನಡೆಯಲಿದೆ ಎಂದು ಕುಲಪತಿಯೊಬ್ಬರು ವಿವರಿಸಿದರು.

ಹೌಸ್‌ಫ‌ುಲ್‌ ಪ್ರದರ್ಶನ:

ಕೋವಿಡ್‌ 2ನೇ ಅಲೆಯಿಂದಾಗಿ ಎಪ್ರಿಲ್‌ ನಿಂದ ಬಾಗಿಲು ಮುಚ್ಚಿದ್ದ  ರಾಜ್ಯದ ಬಹುತೇಕ ಚಿತ್ರಮಂದಿರಗಳು ಶುಕ್ರವಾರದಿಂದ ಹೌಸ್‌ಫ‌ುಲ್‌ ಪ್ರದರ್ಶನದೊಂದಿಗೆ ತೆರೆದುಕೊಳ್ಳಲಿವೆ. ಸರಕಾರ ಅ. 1ರಿಂದ ಇದಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಹೊಸ ಸಿನೆಮಾಗಳು ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳು ಅವುಗಳನ್ನು ಸ್ವಾಗತಿಸಲು ಸಿಂಗಾರಗೊಂಡಿವೆ.

ದಾಖಲಾತಿ ಪ್ರಕ್ರಿಯೆ ನಡೆಯುತ್ತಿ ರುವುದರಿಂದ ಅಕ್ಟೋಬರ್‌ ಮೊದಲ ಅಥವಾ 2ನೇ ವಾರದಲ್ಲಿ ತರಗತಿ ಆರಂಭವಾಗಲಿದೆ. ಆಡಳಿತಾತ್ಮಕ ಸೂಚನೆಗಳನ್ನು ನೀಡುತ್ತಿರುತ್ತೇವೆ. ಪಿ. ಪ್ರದೀಪ್‌, ಆಯುಕ್ತ,  ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next