Advertisement

ಶೌಚ ಕೆಲಸಕ್ಕೆ ಪದವೀಧರರ ಅರ್ಜಿ

12:30 AM Feb 07, 2019 | Team Udayavani |

ಚೆನ್ನೈ: ಶಿಕ್ಷಣದ ಬಳಿಕ ಉದ್ಯೋಗ ಸಿಗುವುದು ಎಷ್ಟು ಕಷ್ಟ ಎನ್ನುವುದು ಮತ್ತೂಮ್ಮೆ ಸಾಬೀತಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಕಸಗುಡಿಸುವವರ ಮತ್ತು ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದ 14 ಹುದ್ದೆಗಳಿಗೆ 4,600 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದೂ ಎಂಥವರು ಗೊತ್ತೇ? ಎಂಬಿಎ, ಬಿ.ಇ. ಬಿ.ಟೆಕ್‌, ಎಂ.ಟೆಕ್‌ ಪದವಿಗಳನ್ನು ಪಡೆದವರೇ ಅದರಲ್ಲಿ ಹೆಚ್ಚಿನವರು. ಅವರ ಜತೆಗೆ ಇತರ ಸ್ನಾತಕೋತ್ತರ ಪದವೀಧರರು, ಪದವೀಧರರೂ ಸೇರಿದ್ದಾರೆ. ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18. ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿಲ್ಲ. ದೃಢಕಾ ಯರಾಗಿರಬೇಕು ಎಂಬ ನಿಯಮ ವಿಧಿಸಲಾಗಿತ್ತು. 

Advertisement

ಉದ್ಯೋಗ ಮಾಹಿತಿ ಕೇಂದ್ರಗಳ ಮೂಲಕವೂ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯಾ ಗಿತ್ತು. ಸಮರ್ಪಕವಾಗಿ ಸಲ್ಲಿಕೆ ಯಾಗಿರಲಿಲ್ಲ ಎಂಬ ಕಾರಣಕ್ಕೆ 677 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next