Advertisement

ಜಿಪಿಬಿಎಲ್‌: ಹರಾಜಿನಲ್ಲಿ ಆಯ್ಕೆಯಾಗದವರಿಗೂ ಹಣ

11:03 PM Mar 30, 2023 | Team Udayavani |

ಬೆಂಗಳೂರು: ಈ ವರ್ಷ ಆಗಸ್ಟ್‌ನಲ್ಲಿ ನಡೆಯಲಿರುವ ಜಿಪಿಬಿಎಲ್‌ (ಬ್ಯಾಡ್ಮಿಂಟನ್‌ ಕೂಟ) ಹರಾಜಿನಲ್ಲಿ ಕೆಲ ವಿಶೇಷಗಳಿವೆ. ರಾಜ್ಯ ಮಟ್ಟದಲ್ಲಿ ನಡೆದಿದ್ದ ಮೊದಲ ಆವೃತ್ತಿ, ಈ ಬಾರಿ ರಾಷ್ಟ್ರೀಯಮಟ್ಟಕ್ಕೆ ವಿಸ್ತರಣೆಯಾಗಲಿದೆ. ಇನ್ನೊಂದು ಮಹತ್ವದ ಸಂಗತಿಯಿದೆ. ಹರಾಜಿನಲ್ಲಿ ಆಯ್ಕೆಯಾಗದ ಆಟಗಾರರಿಗೂ ಕನಿಷ್ಠ ಖಾತ್ರಿ ಮೊತ್ತವಾಗಿ 25,000 ರೂ.ಗಳನ್ನು ನೀಡಲಾಗುತ್ತದೆ. ಯುವ ಆಟಗಾರರು, ಅವರ ಶ್ರಮವನ್ನು ಪ್ರೋತ್ಸಾಹಿಸುವ ಸಲುವಾಗಿ ಜಿಪಿಬಿಎಲ್‌ನ ಸಂಘಟನಾ ಸಂಸ್ಥೆ ಬಿಟ್‌ನ್ಪೋರ್ಟ್‌ ಈ ಕ್ರಮ ತೆಗೆದುಕೊಂಡಿದೆ.

Advertisement

ಆಗಸ್ಟ್‌ ತಿಂಗಳಲ್ಲಿ ನಡೆಯುವ ಹರಾಜಿನಲ್ಲಿ ಒಟ್ಟು 150 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 30 ವಿದೇಶಿ ಆಟಗಾರರಿರಲಿದ್ದಾರೆ. ಕೆಲವು ಆಟಗಾರರು ಸಹಜವಾಗಿಯೇ ಹರಾಜಿನಲ್ಲಿ ಆಯ್ಕೆಯಾಗುವುದಿಲ್ಲ. ಅಂತಹವರನ್ನೂ ಪ್ರೋತ್ಸಾಹಿಸಲು ಜಿಪಿಬಿಎಲ್‌ ಸಿಇಒ ಪ್ರಶಾಂತ್‌ ರೆಡ್ಡಿ ಈ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಶಾಂತ್‌, ಜಿಪಿಬಿಎಲ್‌ ರಾಷ್ಟ್ರೀಯ ಮಟ್ಟಕ್ಕೆ ಏರುತ್ತಿರುವುದರಿಂದ ಬಹಳ ಆನಂದವಾಗಿದೆ. ಹಾಗೆಯೇ ಆಟಗಾರರಿಗೂ ಪ್ರೋತ್ಸಾಹಧನ ನೀಡುತ್ತಿರುವ ಬಗ್ಗೆ ಖುಷಿಯಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next