Advertisement

ಗಲಭೆಯ ಬಳಿಕ ಬೂದಿ ಮುಚ್ಚಿದ ಕೆಂಡದಂತಿರುವ ಗೌಂಡವಾಡ: ಬಂಧನ ಭೀತಿಯಿಂದ ಊರು ತೊರೆದ ಹಲವರು

03:52 PM Jun 19, 2022 | Team Udayavani |

ಬೆಳಗಾವಿ: ಸಮೀಪದ ಗೌಂಡವಾಡ ಗ್ರಾಮದ ಶ್ರೀ ಕಾಳಭೈರವ ದೇವಸ್ಥಾನದ ಜಾಗದ ವಿಷಯವಾಗಿ ಹಳೆ ದ್ವೇಷದಿಂದ ವ್ಯಕ್ತಿಯೋರ್ವನ ಕಗ್ಗೊಲೆ, ನಂತರ ರೊಚ್ಚಿಗೆದ್ದ ಗ್ರಾಮಸ್ಥರ ಹಿಂಸಾಚಾರ ಹಿನ್ನೆಲೆಯಲ್ಲಿ ಯುವಕರು, ಪುರುಷರು ಬಂಧನ ಭೀತಿಯಿಂದ ಊರು ತೊರೆದಿದ್ದು, ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

Advertisement

ಗೌಂಡವಾಡ ಗ್ರಾಮದ ಸತೀಶ ರಾಜೇಂದ್ರ ಪಾಟೀಲ (37 ವ) ಎಂಬ ಯುವಕನನ್ನು ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿ ಕೂಡಲೇ ಈತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೈದು ಹತ್ಯೆ ಮಾಡಲಾಗಿತ್ತು. ಹತ್ಯೆ ಆಗಿರುವ ಸುದ್ದಿ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ನಂತರ ಹಿಂಸಾಚಾರ ಭುಗಿಲೆದ್ದಿದ್ದರಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಯಿತು. ಒಂದೂವರೆ ತಾಸಿನಲ್ಲಿ ಇಡೀ ಗ್ರಾಮವೇ ಹೊತ್ತಿ ಉರಿಯಿತು. ರಾತ್ರಿ 10 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದರೂ ಪರಿಸ್ಥಿತಿ ಕೈ ಮೀರಿ ಹೋಗಿತ್ತು. ಗ್ರಾಮದೆಲ್ಲೆಡೆ ಗುಂಪು ಕಟ್ಟಿಕೊಂಡ ಯುವಕರು ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚಿದರು.

ಇದನ್ನೂ ಓದಿ:ಕಾಂಗ್ರೆಸ್ ನವರು ಯುವಕರನ್ನು ಭಯೋತ್ಪಾದಕರಾಗಿ ಮಾಡುತ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

Advertisement

ಇನ್ನೋವಾ ಕಾರು, 2 ಟ್ರ್ಯಾಕ್ಟರ್, 3 ಟಾಟಾ ಏಸ್, ಸುಮೋ, ನೀರಿನ ಟ್ಯಾಂಕ್, ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಐದಾರು ವಾಹನಗಳ ಮೇಲೆ ಕಲ್ಲು ಎಸೆದು ಜಖಂಗೊಳಿಸಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಣವಿಗೆ ಹಚ್ಚಿರುವ ಬೆಂಕಿಯಿಂದ ರವಿವಾರ ಮಧ್ಯಾಹ್ನದವರೆಗೂ ಹೊಗೆ ಆಡುತ್ತಿತ್ತು. ಗ್ರಾಮದ ಅಂಗಡಿ-ಮುಂಗಟ್ಟುಗಳು ಬಂದ್ ಆಗಿವೆ. ಮನೆ ಮುಂದೆ ಮಹಿಳೆಯರು, ರಸ್ತೆ ಮೇಲೆ ಆಟವಾಡುತ್ತಿದ್ದ ಮಕ್ಕಳು ಮಾತ್ರ ಕಾಣ ಸಿಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next