Advertisement

ಮೇ 22ರಂದು ಗೌಡರು ದೆಹಲಿಗೆ

01:20 AM May 17, 2019 | Sriram |

ಬೆಂಗಳೂರು: ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಆಹ್ವಾನದ ಮೇರೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೇ 22 ರಂದು ದೆಹಲಿಗೆ ತೆರಳಲಿದ್ದಾರೆ.


Advertisement

ದೆಹಲಿಗೆ ತೆರಳುವ ಮುನ್ನ ಮೇ 21ರಂದು ಜೆಡಿಎಸ್‌ ಶಾಸಕಾಂಗ ಸಭೆ ನಡೆಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಫ‌ಲಿತಾಂಶ ಹಿನ್ನೆಲೆಯಲ್ಲಿ ಮುಂದೆ ರೂಪಿಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಸೋನಿಯಾ ಗಾಂಧಿಯವರು ಎಲ್ಲ ಪ್ರಾದೇಶಿಕ ಪಕ್ಷಗಳ ನಾಯಕರ ಸಭೆ ಮೇ 22 ರಂದು ಕರೆದಿದ್ದು ಆ ಸಭೆಗೆ ದೆವೇಗೌಡರಿಗೂ ಆಹ್ವಾನ ನೀಡಲಾಗಿತ್ತು. ಮೇ 18ರಂದು ಹುಟ್ಟುಹಬ್ಬ ಪ್ರಯುಕ್ತ ದೇವೇಗೌಡರು ತಿರುಪತಿಗೆ ತೆರಳಲಿದ್ದು , ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಕುಟುಂಬ ಸದಸ್ಯರು ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next