Advertisement

ನಟ ವೈಜನಾಥ ಬಿರಾದಾರಗೆ “ಗೌಡ’ಪ್ರಶಸ್ತಿ

01:22 PM Dec 21, 2021 | Team Udayavani |

ಕಲಬುರಗಿ: ದಿ| ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ವತಿಯಿಂದ ಪ್ರತಿ ವರ್ಷಕೊಡುವ ಮಾಡುವ “ಗೌಡಪ್ರಶಸ್ತಿ’ಗೆ ಈ ಬಾರಿ ಹಿರಿಯನಟ ವೈಜನಾಥ ಬಿದಾರಾರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಶರಣಗೌಡ ಪಾಟೀಲ ಪಾಳಾ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಭಾಷ್ಚಂದ್ರ ಪಾಟೀಲ ಅವರ 32ನೇ ಪುಣ್ಯಸ್ಮರಣೆ ಪ್ರಯುಕ್ತ ಡಿ.25ರಂದು ಬೆಳಗ್ಗೆ 11 ಗಂಟೆಗೆ ನಗರದ ಡಾ|ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ 5ನೇ ವರ್ಷದ ಗೌಡ ಪ್ರಶಸ್ತಿ ಪ್ರದಾನ ಸಮಾರಂಭ, “ಸಾಹಿತ್ಯ ಬ್ರಹ್ಮ’ ವೆಬ್‌ಸೈಟ್‌ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದ್ದು, ಅಂದು ನಟ ವೈಜನಾಥ ಬಿದಾರಾರ ಅವರಿಗೆ ಗೌಡ ಪ್ರಶಸ್ತಿ ಮತ್ತು 11 ಜನ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌಡ ಗೌರವ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಶ್ರೀನಿವಾಸ ಸರಡಗಿಯ ಚಿಕ್ಕ ವೀರೇಶ್ವರ ಹಿರೇಮಠ ಸಂಸ್ಥಾನದ ಡಾ|ರೇವಣಸಿದ್ಧ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಗ್ರಾಮೀಣಮತ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು “ಸಾಹಿತ್ಯಬ್ರಹ್ಮ’ ವೆಬ್‌ ಸೈಟ್‌ ಲೋಕಾರ್ಪಣೆ ಮಾಡಲಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ| ಸತೀಶ ಹೊಸಮನಿ ಅವರು “ನಾಗಚಂದ್ರ’ ಕವನ ಸಂಕಲನ ಬಿಡುಗಡೆಗೊಳಿಸುವರು.

ಗುವಿವಿ ಕುಲಪತಿ ಡಾ| ದಯಾನಂದ ಅಗಸರ ಅವರು ಪ್ರಶಸ್ತಿ ಪ್ರದಾನ ಮಾಡುವರು. ಬಿಜೆಪಿ ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.

ಗೌಡ ಗೌರವ ಪುರಸ್ಕಾರ: ಅಪ್ಪಾರಾವ್‌ ಅಕ್ಕೋಣಿ (ಶರಣ ಸಾಹಿತ್ಯ), ಬಳಿರಾಮ ಮಹಾರಾಜರು (ಧಾರ್ಮಿಕ), ನಾಗಪ್ಪ ಹೊನ್ನಳ್ಳಿ (ಸಂಗೀತ), ಸಿದ್ದರಾಮ ಹೊನ್ಕಲ್‌ (ಸಾಹಿತ್ಯ), ಡಾ|ವಿಜಯಕುಮಾರ ಪರುತೆ (ಸಾಹಿತ್ಯ), ಡಾ|ಅಹ್ಮದ್‌ ಪಟೇಲ್‌ (ವೈದ್ಯಕೀಯ), ಈರಣ್ಣ ಕಂಬಾರ (ಶಿಲ್ಪಕಲಾ), ಮಹೇಶ್ವರಿ ವಾಲಿ(ಸಮಾಜ ಸೇವೆ), ಡಾ| ಸಂಗಮೇಶ ಹಿರೇಮಠ(ಶಿಕ್ಷಣ), ಚಂದ್ರಶೇಖರ ಕೌಲಗಾ (ಮಾಧ್ಯಮ),ಡಾ|ಶರಣಬಸಪ್ಪ ವಡ್ಡನಕೇರಿ (ಸಾಹಿತ್ಯ ಮತ್ತು ಶಿಕ್ಷಣ) ಅವರಿಗೆ ಗೌಡ ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು,

Advertisement

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಬಿ.ಎಚ್‌.ನಿರಗುಡಿ, ಡಾ|ಆನಂದ ಸಿದ್ದಾಮಣಿ, ಮಲ್ಲಿನಾಥ ಇದ್ದರು.

ಪ್ರತಿ ವರ್ಷ “ಗೌಡ ಪ್ರಶಸ್ತಿ’ಯೊಂದಿಗೆ 5 ಗ್ರಾಂ ಚಿನ್ನದ ನಾಣ್ಯ ನೀಡಲಾಗುತ್ತಿತ್ತು. ಆದರೆ, ಈ ವರ್ಷ ಬಂಗಾರದ ಬದಲು 11 ಸಾವಿರ ನಗದು ನೀಡಲು ಉದ್ದೇಶಿಸಲಾಗಿದೆ.ಈ ಬಗ್ಗೆ ಟ್ರಸ್ಟ್‌ನಲ್ಲಿ ತೀರ್ಮಾನ ಮಾಡಲಾಗಿದೆ. – ಶರಣಗೌಡ ಪಾಟೀಲ ಪಾಳಾ,ಅಧ್ಯಕ್ಷ, ದಿ.ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್‌

Advertisement

Udayavani is now on Telegram. Click here to join our channel and stay updated with the latest news.

Next