Advertisement

ತಯಾರಿಕೆ ಆರಂಭಿಸಿ : ಟೆಸ್ಲಾಗೆ ಬೃಹತ್ ಕೈಗಾರಿಕೆಗಳ ಸಚಿವಾಲಯ ಸೂಚನೆ

05:26 PM Sep 12, 2021 | |

ನವ ದೆಹಲಿ :  ಭಾರತದಲ್ಲಿ ಮೊದಲು ತಯಾರಿಕೆಯನ್ನು ಆರಂಭಿಸುವಂತೆ ಜಗತ್ತಿನ ಅಗ್ರ ಪಂಕ್ತಿಯ ಕಂಪೆನಿಗಳಲ್ಲಿ ಒಂದಾದ ಟೆಸ್ಲಾ ಕಂಪೆನಿಗೆ ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವಾಲಯ ಸೂಚಿಸಿದೆ ಎಂದು ಸರ್ಕಾರದ ಆಂತರಿಕ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

Advertisement

ಟೆಸ್ಲಾದ ವಿದ್ಯುತ್ ಚಾಲಿತ ವಾಹನಗಳಿಗೆ ತೆರಿಗೆ ರಿಯಾಯಿತಿಗಳನ್ನು ಪರಿಗಣಿಸುವ ಮೊದಲು ಭಾರತದಲ್ಲಿಯೇ ತಯಾರಿಕೆಯನ್ನು ಆರಂಭಿಸಿ ಎಂದು ಸಚಿವಾಲಯವು ತಿಳಿಸಿರುವುದಾಗಿ ವರದಿ ವಿವರಿಸಿದೆ.

ಇದನ್ನೂ ಓದಿ :  ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು : ಟ್ರಾಫಿಕ್ ಜಾಮ್, ಮಾತಿನ ಚಕಮಕಿ

ಟೆಸ್ಲಾ ತಯಾರಿಸುವ ವಿದ್ಯುತ್ ಚಾಲಿತ ವಾಹನಗಳ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸುವಂತೆ ಕೋರಿ ಸರ್ಕಾರಕ್ಕೆ ಟೆಸ್ಲಾ ಮನವಿ ಮಾಡಿಕೊಂಡಿತ್ತು.

ಸದ್ಯ, ಕೇಂದ್ರ ಸರ್ಕಾರ ಯಾವುದೇ ವಾಹನ ತಯಾರಿಕಾ ಸಂಸ‍್ಥೆಗಳಿಗೆ ಆಮದು ಸುಂಕದ ರಿಯಾಯಿತಿಯನ್ನು ಈವರೆಗೆ ನೀಡುತ್ತಿಲ್ಲ. ಟೆಸ್ಲಾ ಕಂಪೆನಿ ಸರ್ಕಾರದ ಮುಂದಿಟ್ಟಿರುವ ಮನವಿಯನ್ನು ಪರಿಗಣಿಸಿದರೇ, ಕೋಟ್ಯಾಂತರ ರೂಪಾರಿಗಳ ಬಂಡಬವಾಳವನ್ನು ಹೂಡಿರುವ ಇತರೆ ಕಂಪೆನಿಗಳಿಗ ತಪ್ಪು ಸಂದೇಶವನ್ನು ರವಾನೆ ಮಾಡಿದಂತಾಗುತ್ತದೆ ಎಂದು ಕೂಡ ಸುದ್ದಿ ಮೂಲ ತಿಳಿಸಿದೆ.

Advertisement

ಇತ್ತೀಚೆಗಷ್ಟೇ, ಟೆಸ್ಲಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲಾನ್ ಮಸ್ಕ್ ಈ ಬಗ್ಗೆ ಪ್ರತಿಕ್ರಿಯಿಸಿ, ವಿಶ್ವದಲ್ಲಿಯೇ ಅತ್ಯಂತ ಹೆಚ್ಚಿನ ಪ್ರಮಾಣದ ಆಮದು ಸುಂಕ ಇರುವುದು ಭಾರತದಲ್ಲಿಯೇ. ಹಾಗಾಗಿ ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳು ಉತ್ಪಾದನೆಗಾಗಿ ತಾತ್ಕಾಲಿಕ ಸುಂಕ ರಿಯಾಯಿತಿ ಅಥವಾ ಪರಿಹಾರವನ್ನು ಭಾರತ ಸರ್ಕಾರದಿಂದ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ : ವಿಜಯಪುರ : ನೀರಾವರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next