ನವ ದೆಹಲಿ : ಭಾರತ ದೇಸಿಯತ್ತ ಸಂಪೂರ್ಣವಾಗಿ ಮುಖ ಮಾಡುತ್ತಿದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಇಂದು ಸಿಕ್ಕಿದೆ. ಹೌದು, ಭಾರತ ಸರ್ಕಾರ ದೇಸಿ ಆ್ಯಪ್ ಸ್ಟೋರ್ ನನ್ನು ಬಿಡುಗಡೆ ಮಾಡಿದೆ.
ಭಾರತ ಸರ್ಕಾರ ಮೊಬೈಲ್ ಸೇವಾ ಸ್ಟೋರ್ ಎಂಬ ಹೆಸರಿನ ಅಪ್ಲಿಕೇಶನ್ ಸ್ಟೋರ್ ನ್ನು ಬಿಡುಗಡೆ ಮಾಡಿದ್ದು, ಭಾರತದ ಜನರು ಈಗ ಇದನ್ನು ಬಳಸಬಹುದಾಗಿದೆ.
ಓದಿ : ಕೋವಿಡ್ ತಡೆಗೆ ಬಿಬಿಎಂಪಿ ಪ್ರಸ್ತಾವನೆ: ಚಿತ್ರಮಂದಿರ, ಮದುವೆ ಮಂಟಪ, ಜಿಮ್ ಗೆ ಶಾಕ್ ?
ಗೂಗಲ್ ಆ್ಯಪ್ ಸ್ಟೋರ್ ಹಾಗೂ ಆ್ಯಪ್ ಸ್ಟೋರ್ ಗೆ ಸರ್ಕಾರದಿಂದ ಬಿಡುಗಡೆ ಮಾಡಲಾದ ಈ ಮೊಬೈಲ್ ಸೇವಾ ಆ್ಯಪ್ ಸ್ಟೋರ್ ಪರ್ಯಾಯವಾಗಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ರಾಜ್ಯ ಸಭೆಯಲ್ಲಿ ಹೇಳಿದ್ದರು.
ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಈ ಮೊಬೈಲ್ ಸೆವಾ ಆ್ಯಪ್ ಸ್ಟೋರ್ ಗಾಗಿ, ಅಪ್ಲಿಕೇಶನ್ ಗಳ ಡೆವಲಪರ್ ಗಳಿಗೆ ಹೊಸ ಅಪ್ಲಿಕೇಶನ್ ಗಳನ್ನು ತಯಾರಿಸಲು ಸರ್ಕಾರ ಸೂಚಿಸಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲಾ ಇಲಾಖೆಗಳ ಆ್ಯಪ್ ನ್ನು ಮೊಬೈಲ್ ಸೇವಾ ಆ್ಯಪ್ ಸ್ಟೋರ್ ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗದೆ.
ಓದಿ : ಕೋವಿಡ್; ಚಿತ್ರಮಂದಿರ, ಕಚೇರಿಗಳಲ್ಲಿ ಶೇ.50ರಷ್ಟು ಮಾತ್ರ ಅವಕಾಶ; ಮಹಾರಾಷ್ಟ್ರ ಸರ್ಕಾರ