ನವದೆಹಲಿ: ದೂರಸಂಪರ್ಕ ಸೇವಾ ಕಂಪನಿಯಾದ ವೊಡಾಫೋನ್- ಐಡಿಯಾ ಕಂಪನಿಯ ಶೇ.33ರಷ್ಟು ಷೇರುಗಳನ್ನು ಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ವೊಡಾಫೋನ್- ಐಡಿಯಾ ಕಂಪನಿಯು ಸರ್ಕಾರಕ್ಕೆ ನೀಡದೇ ಬಾಕಿ ಉಳಿಸಿಕೊಂಡಿರುವ 16,133 ಕೋಟಿ ರೂ.ಗಳನ್ನೇ ಬಂಡವಾಳವನ್ನಾಗಿ ಪರಿವರ್ತಿಸಿ, ಸರ್ಕಾರ ಆ ಕಂಪನಿಯ ಪಾಲುದಾರನಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದರಿಂದ ಕಂಪನಿಗೆ, ಸರ್ಕಾರಕ್ಕೆ ಕೊಡಬೇಕಾದ ಬಾಕಿ ಹೊರೆಯಿಂದ ಆಚೆ ಬಂದು ಬಂಡವಾಳ ಆಕರ್ಷಣೆಯತ್ತ ಮನಸ್ಸು ಮಾಡಲು ಸಹಾಯವಾಗಲಿದೆ.
ಬಾಕಿಯನ್ನು ಬಂಡವಾಳವನ್ನಾಗಿ ಪರಿವರ್ತಿಸುವ ಕಾರ್ಯ ಮುಗಿದ ನಂತರ, ಈ ಕಂಪನಿಯಲ್ಲಿ ಸರ್ಕಾರವು ಶೇ. 33ರಷ್ಟು ಷೇರುಗಳನ್ನು ಹೊಂದಲಿದ್ದು, ಶೇ. 50ರಷ್ಟು ಷೇರುಗಳು ಯುನೈಟೆಡ್ ಕಿಂಗ್ಡಮ್ನ ವೊಡಾಫೋನ್ ಪಿಎಲ್ಸಿ ಹಾಗೂ ಆದಿತ್ಯ ಬಿರ್ಲಾ ಗ್ರೂಪ್ (ಎಬಿಜಿ) ಸುಪರ್ದಿಯಲ್ಲಿ ಇರಲಿವೆ.
Related Articles
ಇನ್ನುಳಿದ ಶೇ. 17ರಷ್ಟು ಷೇರುಗಳು ಸಾರ್ವಜನಿಕರ ಪಾಲಿಗೆ ಇರಲಿವೆ.