Advertisement

ಮಂಕಿಪಾಕ್ಸ್‌ ಹೆಚ್ಚಳ: ಕೇಂದ್ರ ಸರಕಾರದಿಂದ ಪರಾಮರ್ಶೆ

10:50 PM Aug 04, 2022 | Team Udayavani |

ಹೊಸದಿಲ್ಲಿ/ಜಾಮ್‌ನಗರ್‌: ದೇಶದಲ್ಲಿ ಒಂಭತ್ತು ಮಂಕಿಪಾಕ್ಸ್‌ ಪ್ರಕರಣಗಳು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆರೋಗ್ಯ ಕ್ಷೇತ್ರದ ತಜ್ಞರ ಜತೆಗೆ ಗುರುವಾರ ಹೊಸದಿಲ್ಲಿಯಲ್ಲಿ ಸಭೆ ನಡೆಸಿತು.

Advertisement

ಅದರಲ್ಲಿ ಹಾಲಿ ಇರುವ ನಿಯಮಗಳನ್ನು ಮರು ಪರಿಷ್ಕರಿಸುವ ಅಗತ್ಯತೆಯ ಬಗ್ಗೆ ಪರಾಮರ್ಶೆ ನಡೆಸಲಾಗಿದೆ. ತುರ್ತು ವೈದ್ಯಕೀಯ ನೆರವು ಸಂಸ್ಥೆಯ ನಿರ್ದೇಶಕ ಡಾ.ಎಲ್‌.ಸ್ವಸ್ತಿಚರಣ್‌ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಇದೊಂದು ಕೇವಲ ತಾಂತ್ರಿಕ ಸಮಿತಿ ಸಭೆಯಾಗಿದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಕೇಂದ್ರ ಸರಕಾರ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ ಆಗಮಿಸಿದ ವ್ಯಕ್ತಿಗಳನ್ನು ಸ್ಕ್ರೀನಿಂಗ್‌ ಮಾಡುವ ಬಗ್ಗೆ ಸೂಚನೆ ಗಳನ್ನು ರವಾನಿಸಿ, ಅದನ್ನು ಅನುಷ್ಠಾನ ಮಾಡುತ್ತಿದೆ.

ಇದೇ ವೇಳೆ, ಗುಜರಾತ್‌ನ ಜಾಮ್‌ನಗರ ಜಿಲ್ಲೆಯ ನವ ನಗ್‌ನಾ ಎಂಬ ಗ್ರಾಮದ ನಿವಾಸಿ ಯಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳನ್ನು ಹೋಲುವ ಅಂಶಗಳು ಪತ್ತೆಯಾಗಿವೆ. ಆತ ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸ ಮಾಡಿ ಲ್ಲದೇ ಇರುವುದು ಗಮನಾರ್ಹ. ಆತನ ದೇಹದ ಮಾದರಿಗಳನ್ನು ಅಹ್ಮದಾ ಬಾದ್‌ನ ಲ್ಯಾಬ್‌ಗ ಕಳುಹಿಸಿಕೊಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next