Advertisement

ನೀಟ್‌, ಜೆಇಇಗೆ ಉಚಿತ ಕೋಚಿಂಗ್‌

06:00 AM Aug 31, 2018 | Team Udayavani |

ಹೊಸದಿಲ್ಲಿ: ಮೆಡಿಕಲ್‌, ಎಂಜಿನಿಯರಿಂಗ್‌ ಕೋರ್ಸ್‌ಗಳ ನೀಟ್‌, ಜೆಇಇ ಪರೀಕ್ಷೆಗಳಿಗೆ ತರಬೇತಿ ಹೇಗೆ ಪಡೆಯಬೇಕು ಎಂದು ಯೋಚನೆ ಮಾಡು ತ್ತಿದ್ದೀರಾ? ಚಿಂತೆ ಬೇಡ. ಅದಕ್ಕಾಗಿ ಲಕ್ಷಗಟ್ಟಲೆ ಮೊತ್ತ ಸುರಿಯಬೇಕಾದ ಅಗತ್ಯವಿಲ್ಲ. ಕೇಂದ್ರ ಸರಕಾರ ಆರಂಭ ಮಾಡಿರುವ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವೇ (ಎನ್‌ಟಿಎ) 2019ರ ಮೇ ತಿಂಗಳಿನಿಂದ ಉಚಿತ ಕೋಚಿಂಗ್‌ ನೀಡ ಲಿದೆ. ದೇಶದಲ್ಲಿರುವ 2,697 ಪರೀಕ್ಷಾ ಕೇಂದ್ರಗಳನ್ನು ಅದು ಕೋಚಿಂಗ್‌ ಸೆಂಟರ್‌ಗಳನ್ನಾಗಿ ಮಾಡಲಿದ್ದು, ಸೆ. 8ರಿಂದ ಕಾರ್ಯಾ ರಂಭ ಮಾಡಲಿವೆ.

Advertisement

ಇದ ಕ್ಕಾಗಿ ಸೆ.1ರಿಂದ 30ರ ವ ರೆಗೆ ಎನ್‌ಟಿಎ ವೆಬ್‌ ಸೈಟ್‌ ಮತ್ತು ಆ್ಯಪ್‌ ನಲ್ಲಿ ನೋಂದಣಿ ಮಾಡಿ ಕೊ ಳ್ಳ ಬ ಹುದು. ಅದಕ್ಕೆ ಪೂರಕವಾಗಿ ಎನ್‌ಟಿಎ 2019ರ ಜನವರಿಯಿಂದ ಅಣಕು ಜೆಇಇ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಿದ್ಧ ಪಡಿಸಲಿದೆ. ಅದರ ಮೂಲಕ ಅಣಕು ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್‌) ಮತ್ತು ಯುಜಿಸಿಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಯುಜಿಸಿಎನ್‌ಇಟಿ)ಗೂ ಸಿದ್ಧತೆ ಮಾಡಿಕೊಳ್ಳಲು ಅವಕಾಶ ಇದೆ. ವಿದ್ಯಾರ್ಥಿಗಳು ಫ‌ಲಿತಾಂಶ ನೋಡಿಕೊಂಡು ಯಾವ ರೀತಿ ಅದನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಬಹುದೆಂದು ನೋಡಿಕೊಳ್ಳಲು ಕೇಂದ್ರ ಗಳಲ್ಲಿಯೇ ಅವಕಾಶ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ಹಂತದ ಪರೀಕ್ಷೆ ನಡೆದ ಬಳಿಕ ತರಬೇತಿ ನೀಡುವುದನ್ನು ಆರಂಭಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next