Advertisement

Deepfakes ; ಐಟಿ ನಿಯಮ ಉಲ್ಲಂಘಿಸಿದ ಸಾಮಾಜಿಕ ಮಾಧ್ಯಮ ಸಂಸ್ಥೆಗಳ ವಿರುದ್ಧ ಎಫ್‌ಐಆರ್

04:51 PM Nov 24, 2023 | Vishnudas Patil |

ಹೊಸದಿಲ್ಲಿ: ಇನ್ನುಮುಂದೆ ಡೀಪ್ ಫೇಕ್‌ಗಳಂತಹ ಆಕ್ಷೇಪಾರ್ಹ ವಿಷಯಗಳಿಂದ ನೊಂದಿದ್ದರೆ ಐಟಿ ನಿಯಮಗಳ ಉಲ್ಲಂಘನೆಗಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಸರಕಾರವು ನಾಗರಿಕರಿಗೆ ನೆರವಾಗಲಿದೆ.

Advertisement

ಸಾಮಾಜಿಕ ಜಾಲತಾಣಗಳ ಪ್ರಮುಖರ ಸಭೆಯ ನಂತರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ‘ ಬಳಕೆದಾರರು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಐಟಿ ನಿಯಮ ಉಲ್ಲಂಘನೆಯ ಬಗ್ಗೆ ತಿಳಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ವೇದಿಕೆಯನ್ನು ಅಭಿವೃದ್ಧಿಪಡಿಸಲಿದೆ. ಇಂದಿನಿಂದ ಐಟಿ ನಿಯಮಗಳ ಉಲ್ಲಂಘನೆಗೆ ಶೂನ್ಯ ಸಹಿಷ್ಣುತೆ ಇದೆ ಎಂದು ಹೇಳಿದ್ದಾರೆ.

ಮಧ್ಯವರ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಮತ್ತು ಅವರು ಕಂಟೆಂಟ್ ಎಲ್ಲಿಂದ ಬಂದಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿದರೆ ವಿಷಯವನ್ನು ಪೋಸ್ಟ್ ಮಾಡಿದ ಘಟಕದ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಐಟಿ ನಿಯಮಗಳ ಪ್ರಕಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಅವುಗಳ ಬಳಕೆಯ ನಿಯಮಗಳನ್ನು ಹೊಂದಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next