Advertisement
“ನಮ್ಮ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳು ನನಗೆ ಕೊಟ್ಟಿರುವ ಉಡುಗೊರೆಯೂ ಇ-ಹರಾಜಿನಲ್ಲಿ ಲಭ್ಯವಿದೆ. ಹರಾಜಿನಲ್ಲಿ ಬಂದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು. ಎಲ್ಲರೂ ಹರಾಜಿನಲ್ಲಿ ಭಾಗವಹಿಸಿ ’ಎಂದು ಪ್ರಧಾನಿ ಮೋದಿ ಭಾನುವಾರ ಕರೆ ನೀಡಿದ್ದಾರೆ.
Related Articles
ಇ-ಹರಾಜು ಆರಂಭವಾಗಿ ಮೂರೇ ದಿನಗಳಲ್ಲಿ ಕೆಲವು ಸ್ಮರಣಿಕೆ/ಉಡುಗೊರೆಗಳ ಬೆಲೆ 10 ಕೋಟಿ ರೂಪಾಯಿ ತಲುಪಿದೆ. ನೀರಜ್ ಚೋಪ್ರಾ ಅವರ ಜಾವೆಲಿನ್, ಪಿವಿ ಸಿಂಧು ಅವರ ರಾಕೆಟ್, ಭವೀನಾ ಪಟೇಲ್ ಅವರ ಟೀ ಶರ್ಟ್, ಒಲಿಂಪಿಕ್ಸ್ ತಾರೆಗಳು ಆಟೋಗ್ರಾಫ್ ಹಾಕಿರುವ ಶಾಲು ಸೇರಿ ಒಟ್ಟು 12 ವಸ್ತುಗಳ ಬೆಲೆ 10 ಕೋಟಿ ರೂಪಾಯಿಗೆ ತಲುಪಿದೆ. ವಿಶೇಷವೆಂದರೆ ಈ ಎಲ್ಲ ವಸ್ತುಗಳು ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳಿಗೆ ಸಂಬಂಧಿಸಿರುವುದೇ ಆಗಿವೆ.
Advertisement