Advertisement
ಮೊದಲ ಹಂತದಲ್ಲಿ 20 ಸಾವಿರ ಕೋ.ರೂ. ಸೆಸ್ ಹಂಚಿಕೆ ಮಾಡಲಾಗುವುದು. ಮುಂದಿನ ವಾರಾಂತ್ಯದ ಒಳಗೆ ಹೆಚ್ಚುವರಿಯಾಗಿ 24 ಸಾವಿರ ಕೋಟಿ ರೂ. ಮೊತ್ತದ ಪರಿಹಾರ ಸೆಸ್ ಹಣವನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಜಿಎಸ್‌ಟಿ ಮಂಡಳಿ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದ್ದಾರೆ. ಆದರೆ 3ನೇ ಹಂತದಲ್ಲಿ ನೀಡುವ 24 ಸಾವಿರ ಕೋಟಿ ರೂ. ಸೆಸ್ ಹಣವು, ಯಾವ ರಾಜ್ಯಗಳಿಗೆ ಕಳೆದ ವರ್ಷ ಕೇಂದ್ರದಿಂದ ಮರುಪಾವತಿಸಲಾದ ಜಿಎಸ್‌ಟಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಹಣ ಬಂದಿದೆಯೋ ಆ ರಾಜ್ಯಗಳಿಗೆ ಮಾತ್ರ ಹಂಚಿಕೆಯಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
2017ರ ಜುಲೈಯಿಂದ ದೇಶಾದ್ಯಂತ ಜಿಎಸ್‌ಟಿ ಜಾರಿಯಾದ ಹಿನ್ನೆಲೆಯಲ್ಲಿ ರಾಜ್ಯಗಳು ಅನುಭವಿಸಿದ ತೆರಿಗೆ ನಷ್ಟವನ್ನು ಸರಿದೂಗಲು ರೂಪಿಸಲಾಗಿದ್ದ ಪರಿಹಾರ ಸೆಸ್ ಅನ್ನು 2022ರ ಜುಲೈ ಅನಂತರವೂ ವಿಸ್ತರಿಸಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ. ಈ ಸೆಸ್ ಅವಧಿ 2022ರ ಜುಲೈಗೆ ಅಂತ್ಯ ಗೊಳ್ಳಬೇಕಿತ್ತು. ಆದರೆ ಕೊರೊನಾ ಬಿಕ್ಕಟ್ಟಿನಿಂದ ರಾಜ್ಯಗಳು ಆರ್ಥಿಕ ಸಂಕಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಅದನ್ನು 2022ರ ಜುಲೈಯ ಬಳಿಕವೂ ವಿಸ್ತರಿಸಲಾಗುತ್ತದೆ ಎಂದಿದ್ದಾರೆ. ಜಿಎಸ್‌ಟಿ ಮಂಡಳಿಯ ಹಿಂದಿನ ಸಭೆಯಲ್ಲಿ ಕರ್ನಾಟಕವು ನೀಡಿದ ಸಲಹೆಯನ್ನು ಪರಿಗಣಿಸಲಾಗಿದೆ. ಸೆಪ್ಟಂಬರ್‌ವರೆಗೆ ಸಂಗ್ರಹವಾಗಿರುವ ಸೆಸ್ ಮೊತ್ತವನ್ನು ಬಿಡುಗಡೆ ಮಾಡಿರುವುದು ಸಂತಸ ತಂದಿದೆ. 2022ರ ಅನಂತರವೂ ಸೆಸ್ ಸಂಗ್ರಹ ವಿಸ್ತರಣೆಯ ಸಲಹೆಯನ್ನು ಸ್ವಾಗತಿಸುತ್ತೇವೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ