Advertisement

ಒಮಿಕ್ರಾನ್‌ ತಡೆಗೆ ಸರಕಾರ ಸನ್ನದ್ಧ: ಸಿಎಂ

11:23 PM Dec 06, 2021 | Team Udayavani |

ಬೀದರ್‌: ರಾಜ್ಯದಲ್ಲಿ ಕೋವಿಡ್‌ ಸೋಂಕು ತಡೆಗೆ ಸರಕಾರ ಎಲ್ಲ ರೀತಿಯಲ್ಲಿ ಸನ್ನದ್ಧವಾಗಿದ್ದು, ಮುಂದಿನ ಪರಿಣಾಮ ಮತ್ತು ವಿಸ್ತರಣೆ ಬಗ್ಗೆ ಕಾಲಕಾಲಕ್ಕೆ ತಜ್ಞರಿಂದ ಮಾಹಿತಿ ಪಡೆದು ಚಿಕಿತ್ಸೆ, ಸೌಲಭ್ಯ ನೀಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಭಾಲ್ಕಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಒಮಿಕ್ರಾನ್‌ ಕಾಣಿಸಿಕೊಂಡಿದ್ದು, ಸರಕಾರ ಅಗತ್ಯ ನಿಗಾ ವಹಿಸಿದ್ದಲ್ಲದೆ, ತಜ್ಞರ ಮಾರ್ಗಸೂಚಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

ವಿಶೇಷವಾಗಿ ವಿದ್ಯಾರ್ಥಿಗಳ ವಸತಿ ನಿಲಯದಂಥ ಕ್ಲಸ್ಟರ್‌ಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ವೈರಸ್‌ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿಗಳನ್ನು ಕ್ಲಸ್ಟರ್‌ ಮ್ಯಾನೇಜ್‌ಮೆಂಟ್‌ಗಳಿಗೆ ಕೊಡಲಾಗಿದೆ.

ಇದನ್ನೂ ಓದಿ:ಹಾವುಗಳ ಹಾವಳಿ ತಡೆಯದೆ ಮನೆಗೇ ಬೆಂಕಿಯಿಟ್ಟ!

ಚಿಕ್ಕಮಗಳೂರು ಹಾಸ್ಟೆಲ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ವಿದ್ಯಾರ್ಥಿಗಳ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಹೇಳಿದರು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next