Advertisement

7 ಬೃಹತ್‌ ಕುಡಿಯುವ ನೀರಿನ ಯೋಜನೆಗೆ ಒಪ್ಪಿಗೆ: ಸಚಿವ ಬೊಮ್ಮಾಯಿ

11:03 PM May 27, 2021 | Team Udayavani |

ಬೆಂಗಳೂರು: ರಾಜ್ಯದ 4,647 ಗ್ರಾಮೀಣ ಜನವಸತಿ ಹಾಗೂ 27 ಪಟ್ಟಣ ಪ್ರದೇಶಗಳ 6.768.85  ಕೋ. ರೂ.  ಮೊತ್ತದ 7 ಬೃಹತ್‌ ಕುಡಿಯುವ ನೀರಿನ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Advertisement

ಗುರುವಾರ ಸಿಎಂ ಯಡಿಯೂರಪ್ಪ  ಅಧ್ಯಕ್ಷತೆಯಲ್ಲಿ  ಜರಗಿದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಕೇಂದ್ರ ಸರಕಾರದ ಜಲ ಜೀವನ್‌ ಮಿಷನ್‌ ಹಾಗೂ ನಬಾರ್ಡ್‌ ನೆರವಿನೊಂದಿಗೆ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದ್ದು,  ಸುಮಾರು 6 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈಗ ಸಚಿವ ಸಂಪುಟದ ಅನುಮೋದನೆ ದೊರೆತಿದ್ದು, 1,431 ಕೋ. ರೂ. ವೆಚ್ಚದ ಈ ಮಹತ್ವದ ಮೊದಲ ಹಂತದ ಯೋಜನೆಗೆ  ಹಾಗೂ ಎರಡನೇ ಹಂತದಲ್ಲಿ 954.51.ಕೋ.ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ.

ಇದರಲ್ಲಿ ಉಡುಪಿ ಜಿಲ್ಲೆಯ  ಬೈಂದೂರು ತಾಲೂಕಿನ 788 ಜನವಸತಿಗಳು, ಬೈಂದೂರು, ಪಡುವರೆ ಹಾಗೂ ಯಡ್ತರೆ ಪಟ್ಟಣಗಳಿಗೆ 396 ಕೋ. ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳೂ ಸೇರಿವೆ ಎಂದರು.

Advertisement

ಜಮೀನು ಕಳೆದುಕೊಂಡವರಿಗೆ ಉದ್ಯೋಗ ಮೀಸಲಾತಿ :

ವಿವಿಧ ಯೋಜನೆಗಳಿಗೆ ಜಮೀನು ಕಳೆದುಕೊಂಡವರಿಗೆ  ಸರಕಾರಿ ಉದ್ಯೋಗಗಳಲ್ಲಿ  ಶೇ. 5ರಷ್ಟು ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಇನ್ನೂ 25 ವರ್ಷಗಳ ಕಾಲ ಮುಂದುವರಿಸುವಂತೆ ಡಿಸಿಎಂ ಗೋವಿಂದ ಕಾರಜೋಳ ನೀಡಿರುವ ಸಲಹೆಗೆ ಸಂಪುಟ ಸಹಮತ ವ್ಯಕ್ತಪಡಿಸಿದೆ ಎನ್ನಲಾಗಿದೆ.

ನೀನು ಸುಮ್ಮನಿರಪ್ಪ :

ಹಾಸನ ವೈದ್ಯಕೀಯ ಕಾಲೇಜಿನ ಅಭಿ ವೃದ್ಧಿ ಬಗ್ಗೆ ಡಿಸಿಎಂ  ಅಶ್ವತ್ಥನಾರಾಯಣ ಮಾಹಿತಿ ನೀಡುತ್ತಿದ್ದಾಗ, “ನೀನು ಹೇಳಿದೆಲ್ಲ ಆಗಿದ್ದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಮಾಧುಸ್ವಾಮಿ ಲಘು ಧಾಟಿಯಲ್ಲಿ ಹೇಳಿದ್ದು, ಆಗ  ನೀನು ಸುಮ್ಮನಿರಪ್ಪ ಎಂದು  ಸಿಎಂ  ಹೇಳಿದರು.

ಎಂಆರ್‌ಮೆಷಿನ್‌ :

ಕೋವಿಡ್ ಸೋಂಕಿತರಿಗಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಮಷಿನ್‌ ಕೊರತೆ ಇರುವುದರಿಂದ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್‌ ಮೆಷಿನ್‌ ಅಳವಡಿಸಲು ಕಾರಜೋಳ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ಸಂಪುಟ ನಿರ್ಧರಿಸಿದೆ ಎನ್ನಲಾಗಿದೆ.

ಪ್ರಮುಖ ನಿರ್ಣಯಗಳು :

ಕರ್ನಾಟಕ ಕೃಷಿ ಪೀಡೆ ಮತ್ತು ರೋಗಗಳು 2021 ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ.

ಕರ್ನಾಟಕ ಎಲೆಕ್ಟ್ರಿಕ್‌  ವೆಹಿಕಲ್‌ ಮತ್ತು ಎನರ್ಜಿ ಸ್ಟೋರೇಜ್‌ ಪಾಲಿಸಿ 2017ಕ್ಕೆ ಒಪ್ಪಿಗೆ.

2011ರ ಕೆಪಿಎಸ್‌ಸಿ  ಪ್ರೊಬೆಷನರಿ ನೇಮಕದ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧದ  ತನಿಖೆಗೆ ನಿರಾಕರಣೆ.

Advertisement

Udayavani is now on Telegram. Click here to join our channel and stay updated with the latest news.

Next