Advertisement

Hubli; ಸರ್ಕಾರ ಕೂಡಲೇ ನಾಗೇಂದ್ರ ರಾಜೀನಾಮೆ ಪಡೆಯಬೇಕು: ಶೆಟ್ಟರ್ ಆಗ್ರಹ

03:56 PM Jun 02, 2024 | Team Udayavani |

ಹುಬ್ಬಳ್ಳಿ: ವಾಲ್ಮೀಕಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಕೂಡಲೇ ಸರ್ಕಾರ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಒತ್ತಾಯಿಸಿದರು.

Advertisement

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ನಾಚಿಕೆಯಿಲ್ಲ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ನ ಆಂತರಿಕ ಹಾಗೂ ಸಿಎಂ, ಡಿಸಿಎಂ ನಡುವಿನ ಕಲಹ ಹೊರಗಡೆ ಬರಲಿದೆ. ಕಾಂಗ್ರೆಸ್‌ನವರ ಅಸಮಾಧಾನದಿಂದ ಸರ್ಕಾರ ಬೀಳುತ್ತದೆ. ಹೀಗಿದ್ದಾಗ ಬಿಜೆಪಿಯವರು ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ ಎಂದರು.

ಯಾಗ ಮಾಡಿಸುವುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಎಕ್ಸಪರ್ಟ್. ಕೇರಳ ಅಲ್ಲ ಭೂಗತದಲ್ಲಿ ಹೋಗಿಯಾದರೂ ಯಾಗ ಮಾಡಿಸುವ ತಾಕತ್ತು ಡಿಕೆಶಿಗೆ ಇದೆ. ಯಾಗ ಪೂಜೆ ಮಾಡುವುದರಲ್ಲಿ ಅವರು ಎಕ್ಸಪರ್ಟ್. ಯಾಗದಿಂದ ಒಬ್ಬರಿಗೆ ತೊಂದರೆ ಆಗುತ್ತದೆ ಎಂದರೆ ಎಲ್ಲರೂ ಅದನ್ನೇ ಮಾಡುತ್ತಿದ್ದರು. ನಾನು ಬಸವ ತತ್ವದವನು. ಅದರ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಈ ಬಗ್ಗೆ ಡಿಕೆಶಿಗೆ ಕೇಳಿ ಎಂದರು.

ಮೋದಿ ಮೂರನೇ ಬಾರಿ ಪ್ರಧಾನಿ ಆಗಬೇಕು ಅನ್ನುವುದು ಜನರ ಆಶಯವಾಗಿತ್ತು. ಎಕ್ಸಿಟ್ ಪೋಲ್‌ನಲ್ಲಿ ಸ್ಪಷ್ಟ ಬಹುಮತ ಸಿಕ್ಕಿದೆ. ಹೀಗಾಗಿ ಫಲಿತಾಂಶದಲ್ಲಿ ನಮಗೆ 375 ಆಗಬಹುದು, 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬಹುದು ಎಂದರು.

ಕಳೆದ ಬಾರಿ ಎಕ್ಸಿಟ್ ಪೋಲ್ ಕಾಂಗ್ರೆಸ್ ಪರವಾಗಿ ಹೇಳಿತ್ತು. ಬಿಜೆಪಿ ಅಧಿಕಾರಕ್ಕೆ ಬರುತ್ತದೆಂದು ಎಲ್ಲೂ ಹೇಳಿಲ್ಲ. ಇದೀಗ ಕಾಂಗ್ರೆಸ್ ನಾಯಕರು ಸುಳ್ಳು ಸೋಲು ಒಪ್ಪಿಕೊಳ್ಳುವ ಬದಲು ಸಬೂಬು ಹೇಳುತ್ತಿದ್ದಾರೆ. ಬಹುತೇಕ ಎಕ್ಸಿಟ್‌ ಪೋಲ್‌ಗಳು ಎನ್‌ಡಿಎ ಪರವಾಗಿದೆ ಎಂದರು.

Advertisement

ಬೆಳಗಾವಿಯಲ್ಲಿ ಜನರ ಆಶೀರ್ವಾದದಿಂದ ನಾನು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ. ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅದನ್ನು ಬದಲು ಮಾಡುವ ಹಕ್ಕು ಯಾರಿಗೂ ಇಲ್ಲ. ಪ್ರಿಯಾಂಕ ಖರ್ಗೆ, ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next