Advertisement
ಶಾಲೆಗಳ ದತ್ತು ಯೋಜನೆಯಡಿ ಅಭಿವೃದ್ಧಿ ಕೆಲಸಗಳ ಕಡತ ಸಹಾಯಕ ಕಮಿಷನರ್ ಮುಂದಿದೆ.ದತ್ತು ಪಡೆದ ಶಾಲೆಗಳ ಹೆಸರು ಮತ್ತು ಅಲ್ಲಿಆಗಬೇಕಾದ ಸವಲತ್ತುಗಳ ಮಾಹಿತಿ ಸಾರ್ವಜನಿಕಶಿಕ್ಷಣ ಇಲಾಖೆ ಮೂಲಕ ಸಹಾಯಕ ಕಮಿಷನರ್‌ಕಚೇರಿ ತಲುಪಿದೆ. ಸಹಾಯಕ ಕಮಿಷನರ್‌ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ಶಾಸಕರು ನೀಡಿರುವಯೋಜನೆಗಳು ಅವಶ್ಯ ಇವೆಯೇ ಎಂದು ಪರಿಶೀಲಿಸಿ,ಕಾಮಗಾರಿಗಳಿಗೆ ಏಜೆನ್ಸಿ ಹಾಗೂ ಕೆಲಸದ ಪ್ರಗತಿಗೆತಕ್ಕಂತೆ ಹಣ ಬಿಡುಗಡೆ ಮಾಡುವ ಅಧಿಕಾರ ಹೊಂದಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಇದೀಗ ಪ್ರದೇಶಾಭಿವೃದ್ಧಿ ನಿಧಿಯಲ್ಲಿ 60.60 ಲಕ್ಷ ರೂ.ಗಳನ್ನು ಮೂರು ದತ್ತು ಶಾಲೆಯವಿವಿಧ ಕಾಮಗಾರಿಗೆ ಹಂಚಿದ್ದಾರೆ. ಅರಗಾ ಶಾಲೆಗೆ 17.20 ಲಕ್ಷರೂ. ಅನುದಾನ ನೀಡಿದ್ದಾರೆ. ಇದರಲ್ಲಿ 8 ಲಕ್ಷ ರೂ. ಕಾಂಪೌಂಡು,2 ಲಕ್ಷದ ಪ್ರೋಜೆಕ್ಟರ್, 2 ಲಕ್ಷ ರೂ. ಪೀಠೊಪಕರಣಕ್ಕೆ ವೆಚ್ಚಮಾಡುವಂತೆ ಸೂಚಿಸಿದ್ದಾರೆ. ಅಲ್ಲದೇ 5 ಲಕ್ಷ ರೂ.ದಲ್ಲಿ ಪ್ರಯೋಗಾಲಯ ಸಾಮಾಗ್ರಿ, ಗ್ರಂಥಾಲಯಕ್ಕೆ ಪುಸ್ತಕ, ಕಪಾಟು ಖರೀದಿಸಲು ಹೇಳಿದ್ದಾರೆ.
Related Articles
Advertisement
ಅರಗಾ ಶಾಲೆಯ ಹಳೆಯ ಕಟ್ಟಡ ತೆಗೆದು ಒಂದು ಕೋಣೆ ನಿರ್ಮಿಸಿಕೊಟ್ಟರೆ ನಮಗೆ ಅನುಕೂಲ. ಇದರಿಂದ ವಿದ್ಯಾರ್ಥಿಗಳಿಗೆ ಹೊಸ ಕೊಠಡಿ ಜೊತೆಗೆ ಆಟದ ಮೈದಾನವೂವಿಸ್ತಾರವಾಗಲಿದೆ. 1 ಎಕರೆ ಜಾಗ ನಮ್ಮಶಾಲೆಗಿದ್ದು, ಈಗ ಅಪೂರ್ಣವಾಗಿರುವಶಾಲಾ ಕಂಪೌಂಡು ಪೂರ್ಣನಿರ್ಮಿಸಿಕೊಡಬೇಕು. ಹಾಗೂ ಹತ್ತುಕಂಪ್ಯೂಟರ್ ಕೊಟ್ಟರೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ. – ಮಂಜುಳಾ ನಾಯ್ಕ, ಮುಖ್ಯೋಪಾಧ್ಯಾಯರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಗಾ.
ಅಮದಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ:
ಅಮದಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 97 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ 25.20 ಲಕ್ಷ ವ್ಯಯಿಸಲು ಶಾಸಕರು ಪ್ರಸ್ತಾವನೆ ಕಳುಹಿಸಿದ್ದಾರೆ. ಈ ಮೊತ್ತದಲ್ಲಿ ಶಾಲೆಗೆ ಪ್ರವೇಶ ದ್ವಾರ(ಸ್ವಾಗತ ಆರ್ಚ್), 1 ಶಾಲಾ ಕೊಠಡಿ, ಸ್ಮಾರ್ಟ್‌ಕ್ಲಾಸ್, ಪ್ರಯೋಗಾಲಯ ಸಾಮಾಗ್ರಿ, ಕ್ರೀಡಾ ಸಾಮಾಗ್ರಿ, ಸಿಸಿ ಟಿವಿ ಕ್ಯಾಮರಾಗಳು, ಗ್ರಂಥಾಲಯ ಮಾಡಲು ಸೂಚಿಸಲಾಗಿದೆ.
ಅಮದಳ್ಳಿ ಶಾಲೆಗೆ ಹೆಚ್ಚಿನ ಅನುಕೂಲಗಳು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಆಗಲಿ ಎಂದು ಬಯಸುತ್ತೇವೆ. ಅದಷ್ಟು ಬೇಗ ಕಾಮಗಾರಿಗಳು ಆಗಲಿ. ನಮಗೆ ಒಂದು ಕೊಠಡಿಯ ಅವಶ್ಯಕತೆ ಇದೆ. ಅದು ಬೇಗ ಆಗಲಿದೆ ಎಂಬ ನಿರೀಕ್ಷೆ ಇದೆ. ಸ್ಮಾರ್ಟ್‌ಕ್ಲಾಸ್ ಆದರೆ ವಿದ್ಯಾರ್ಥಿಗಳು ಹೆಚ್ಚು ಆಕರ್ಷಕವಾಗಿ ಕಲಿಯಬಹುದು.ಖಾಸಗಿಯವರಿಗಿಂತ ನಾವೇನು ಕಡಿಮೆಯಿಲ್ಲ ಎಂಬಭಾವನೆ ತಾನಾಗಿಯೇ ಪೋಷಕರಲ್ಲಿ ಬೆಳೆಯಲಿದೆ. –ಪಿ.ಎಚ್. ನಾಯ್ಕ ಕರ್ನಾಟಕ ಪಬ್ಲಿಕ್ ಶಾಲೆ. ಅಮದಳ್ಳಿ.
ಕಲ್ಲೇಶ್ವರ ಸರ್ಕಾರಿ ಪ್ರೌಢಶಾಲೆ :
ಅಂಕೋಲಾ ತಾಲೂಕಿನ ಕಲ್ಲೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೈಕಲ್ ಸ್ಟ್ಯಾಂಡ್, 3 ಕೊಠಡಿಗೆ ಟೈಲ್ಸ್ ಅಳವಡಿಕೆ, 2 ಕಂಪ್ಯೂಟರ್, ಕಟ್ಟಡಕ್ಕೆ ಸುಣ್ಣಬಣ್ಣ,ಕ್ರೀಡಾ ಸಾಮಾಗ್ರಿ, ಪ್ರಯೋಗಾಲಯಸಾಮಾಗ್ರಿ ಒದಗಿಸಲು 18.25 ಲಕ್ಷ ರೂ. ಅನುದಾನವನ್ನು ಶಾಸಕರು ನೀಡಿದ್ದಾರೆ.
ಕಲ್ಲೇಶ್ವರ ಪ್ರೌಢಶಾಲೆಗೆ ಈಚೆಗೆ ನಾನು ವರ್ಗಾವಣೆಯಾಗಿ ಬಂದಿರುವೆ. ಶಾಲೆ ದತ್ತು ಬಗ್ಗೆ ಪತ್ರಿಕೆಗಳಲ್ಲಿ ನೋಡಿದ್ದೆ. ಅದು ಅನುಷ್ಠಾನವಾದರೆ ಸಂತೋಷ. ಶಾಲೆಯ ಅವಶ್ಯಕತೆಗಳು ಬೇಗ ಅನುಷ್ಠಾನವಾಗಲಿ ಎಂದು ಬಯಸುವೆ. ಅದು ವಿದ್ಯಾರ್ಥಿಗಳಿಗೆ ಅನುಕೂಲ. –ಪಾರ್ವತಿ ನಾಯ್ಕ, ಮುಖ್ಯೋಪಾಧ್ಯಾಯರು. ಸರ್ಕಾರಿ ಪ್ರೌಢಶಾಲೆ, ಕಲ್ಲೇಶ್ವರ
ದತ್ತು ಪಡೆದ ಶಾಲೆಗಳ ಮೂಲ ಸೌಕರ್ಯ ಹೆಚ್ಚಿಸಿ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆಗೆ ಹೆಚ್ಚು ಅವಕಾಶ ಮಾಡಿಕೊಡುವ ಉದ್ದೇಶ ನನ್ನದು. ಶಾಲೆಯ ಅವಶ್ಯಕತೆಗಳನ್ನು ಡಿಡಿಪಿಐ ಜೊತೆ ಚರ್ಚಿಸಿ, ಕೆಲ ಬದಲಾವಣೆ ಮಾಡಿ ಕೊಳ್ಳಬಹುದು. ನನ್ನ ಕ್ಷೇತ್ರದ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಬೇಕಷ್ಟೆ.-ರೂಪಾಲಿ ನಾಯ್ಕ, ಶಾಸಕರು.
–ನಾಗರಾಜ ಹರಪನಹಳ್ಳಿ