Advertisement
ಶಾಸಕ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಚಿಕ್ಕೋಡಿ-ಸದಲಗಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್, ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ವಾಳಕಿ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೊಸಯಡೂರಶಾಲೆಗಳನ್ನು ಆಯ್ಕೆ ಮಾಡಿಕೊಂಡು ಶಾಸಕರಪ್ರದೇಶಾಭಿವೃದ್ಧಿ ಅನುದಾನದಡಿ ಶಾಲೆಗಳದುರಸ್ತಿಗೆ ಒಟ್ಟು 2.83 ಕೋಟಿ ರೂ.ಯೋಜನೆಯ ಪ್ರಸ್ತಾವನೆ ರೂಪಿಸಿದ್ದಾರೆ.ಚಿಕ್ಕೋಡಿ ಅಭಿವೃದ್ಧಿ ವಿಷಯದಲ್ಲಿ ಮುಂಚೂಣಿಯಲ್ಲೇ ಇದೆ. ರಸ್ತೆ, ಸಮುದಾಯ ಭವನ, ಚರಂಡಿ, ನೀರಾವರಿಯೋಜನೆ ಹೀಗೆ ಹತ್ತು ಹಲವು ಅಭಿವೃದ್ಧಿಕಾರ್ಯಗಳು ಪ್ರಗತಿಯಲ್ಲಿವೆ. ಆದರೆ ನಿರೀಕ್ಷೆಗೆ ತಕ್ಕಷ್ಟು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಕಾಣಬೇಕಿದೆ.
Related Articles
Advertisement
ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹೊಸಯಡೂರ-(82.15 ಲಕ್ಷ ರೂ. ಯೋಜನೆ) :
2019ರಲ್ಲಿ ಕೃಷ್ಣಾ ನದಿ ಪ್ರವಾಹದ ಹೊಡೆತಕ್ಕೆ ನಲುಗಿ ಹೋದ ಹೊಸಯಡೂರದ ಸರ್ಕಾರಿ ಹಿರಿಯ ಪ್ರಾಥಮಿಕಶಾಲೆ ಸಂಪೂರ್ಣ ಮುಳುಗಡೆಗೊಂಡಿತ್ತು. ಇದರಿಂದ ಕೊಠಡಿಗಳು ಶಿಥಿಲಾವಸ್ಥೆತಲುಪಿವೆ. 1ರಿಂದ 7ನೇ ತರಗತಿಯಲ್ಲಿ 120ಮಕ್ಕಳು ಓದುತ್ತಿದ್ದಾರೆ. ನದಿ ಬದಿಯಲ್ಲಿ ಇದ್ದರೂ ಮಕ್ಕಳು ಕುಡಿಯುವ ನೀರಿನಿಂದವಂಚಿತರಾಗಿದ್ದು, ಶಾಶ್ವತ ಕುಡಿಯುವ ನೀರಿನಯೋಜನೆ ರೂಪಿಸಲು ಸರ್ಕಾರದ ಮುಂದೆ ಬೇಡಿಕೆ ಇದೆ.ಶಾಲೆಯಲ್ಲಿ ಮೂರು ಕೊಠಡಿ, ಗ್ರಂಥಾಲಯ, ಕುಡಿಯುವನೀರು ಮತ್ತು ಶೌಚಾಲಯ ನಿರ್ಮಾಣ ಮಾಡಲು ಶಾಸಕರು 82.15 ಲಕ್ಷ ರೂ. ಯೋಜನೆ ಸಿದ್ಧಪಡಿಸಿದ್ದಾರೆ.
ಕೃಷ್ಣಾ ನದಿ ಪ್ರವಾಹದಲ್ಲಿ ಮುಳುಗಡೆಗೊಂಡಿದ್ದ ಶಾಲೆಯ ಕಟ್ಟಡ ದುರಸ್ತಿಯಾಗಬೇಕಿದೆ.ಈ ಕುರಿತು ಇಲಾಖೆಗೆ ಮಾಹಿತಿನೀಡಲಾಗಿದೆ. ಶಾಲೆಯನ್ನು ಶಾಸಕರು ದತ್ತು ಪಡೆದಿರುವುದು ಇನ್ನೂನನ್ನ ಗಮನಕ್ಕೆ ಬಂದಿಲ್ಲ. ಕೊಠಡಿನಿರ್ಮಾಣ ಮಾಡಿಕೊಡಬೇಕೆಂದುಶಾಸಕರ ಗಮನಕ್ಕೆ ತರಲಾಗಿದೆ. -ಡಿ.ಎಸ್. ಕಾಂಬಳೆ, ಮುಖ್ಯಾಧ್ಯಾಪಕರು, ಹೊಸಯಡೂರ
ಕನ್ನಡ ಹಿರಿಯ ಪ್ರಾಥಮಿಕ ಶಾಲೆ :
ವಾಳಕಿ-(91.15 ಲಕ್ಷ ರೂ. ಯೋಜನೆ) ಶಾಸಕ ಗಣೇಶ ಹುಕ್ಕೇರಿ ಪ್ರೀತಿಯ ಗ್ರಾಮ ವಾಳಕಿ. ಇಲ್ಲಿನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿಯವರಿಗೆ 485 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಮಳೆ ನೀರಿನಿಂದ ಶಾಲೆ ಶಿಥಿಲಾವಸ್ಥೆ ಕಂಡಿದೆ. ಗ್ರಾಮದಲ್ಲಿ ಮರಾಠಿ ಭಾಷಿಕರು ಇದ್ದರೂ ಕನ್ನಡ ಶಾಲೆಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಶಾಲೆಯ ಅಭಿವೃದ್ಧಿಗೆ ನಾಲ್ಕು ಕೊಠಡಿ ನಿರ್ಮಾಣಕ್ಕೆ 91.15 ಲಕ್ಷ ರೂ. ಯೋಜನೆ ರೂಪಿಸಲಾಗಿದೆ.
ಖಾಸಗಿ ಶಾಲೆಗಳ ಹಾಗೇ ಸರ್ಕಾರಿ ಶಾಲೆಗಳು ಪ್ರಗತಿ ಕಾಣಬೇಕು. ಖಾಸಗಿ ಶಾಲೆಗಳಲ್ಲಿ ಸಿಗುವ ಮೂಲಸೌಲಭ್ಯ ಸರ್ಕಾರಿ ಶಾಲೆಯಲ್ಲಿಯೂ ಸಿಗಲು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪಣ ತೊಟ್ಟು ಮಾದರಿ ಶಾಲೆ ನಿರ್ಮಾಣ ಮಾಡಲುಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ.ಶಿಕ್ಷಣ, ಆರೋಗ್ಯ ಮತ್ತು ಕುಡಿಯುವನೀರಿಗೆ ಸರ್ಕಾರ ಆದ್ಯತೆ ಕೊಡಬೇಕು. – ಗಣೇಶ ಹುಕ್ಕೇರಿ, ಶಾಸಕ, ಚಿಕ್ಕೋಡಿ-ಸದಲಗಾ ಕ್ಷೇತ್ರ
-ಮಹಾದೇವ ಪೂಜೇರಿ