Advertisement
ಸುಗಮ ಕಲಾಪಕ್ಕೆ ಸಹಕರಿಸುವಂತೆ ಕೋ ರುವ ಸಲುವಾಗಿ ಬುಧ ವಾರ ಸರ್ವಪಕ್ಷಗಳ ಸಭೆ ನಡೆದಿದ್ದು, ಈ ವೇಳೆ ವಿಪಕ್ಷ ಕಾಂಗ್ರೆಸ್ ಮಣಿಪುರದ ವಿಚಾರ ಚರ್ಚೆಯಾಗಬೇಕು ಎಂದು ಆಗ್ರಹಿಸಿದೆ. ಕಲಾಪ ಸರಾಗವಾಗಿ ಸಾಗ ಬೇಕೆಂದರೆ ವಿಪಕ್ಷಗಳ ಧ್ವನಿ ಗೂ ಅವಕಾಶ ಸಿಗಬೇಕು. ಎರಡು ಕೈ ತಟ್ಟಿದರಷ್ಟೇಚಪ್ಪಾಳೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಇದೇ ವೇಳೆ, ಮಣಿಪುರ ವಿಚಾರದ ಚರ್ಚೆಗೆ ಸರಕಾರ ಸಿದ್ಧವಿದೆ ಎಂದು ಬಿಜೆಪಿ ಹೇಳಿದೆ. ಇದೇ ವೇಳೆ, ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಅಂಗೀಕರಿಸಬೇಕು ಎಂದು ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಆಗ್ರಹಿಸಿವೆ.
ಗುಂಪೊಂದು ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಣಿಪುರದಲ್ಲಿ ಈ ಮಹಿಳೆಯರ ಮೇಲೆ ಹೊಲದಲ್ಲಿ ಸಾಮೂಹಿಕ ಅತ್ಯಾಚಾರಗೈದು, ಬೆತ್ತಲೆ ಮೆರವಣಿಗೆ ಮಾಡಿಸಲಾಗಿದೆ ಎಂದು ಬುಡ ಕಟ್ಟು ಸಮುದಾಯ ಆರೋಪಿಸಿದೆ. ಮೇ 4ರಂದು ನಡೆದಿದೆ ಎನ್ನಲಾದ ಘಟನೆಯ ವೀಡಿಯೋ ಈಗ ಹೊರಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಇನ್ನೂ 6 ಲಕ್ಷ ಬುಲೆಟ್‌ಗಳು ಹಾಗೂ 3 ಸಾವಿರ ಶಸ್ತ್ರಾಸ್ತ್ರಗಳು ಇನ್ನೂ ಮಣಿಪುರದ ಬಂಡು ಕೋರರ ಕೈಯ್ಯಲ್ಲೇ ಇವೆ ಎಂದು ಅಧಿಕಾ ರಿಗಳು ಮಾಹಿತಿ ನೀಡಿದ್ದಾರೆ. ಸಂಘರ್ಷ ಆರಂಭವಾದಾಗಿನಿಂದ ಪೊಲೀಸರ ಬಳಿ ಯಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಂಡುಕೋರರು ಲೂಟಿ ಮಾಡಿದ್ದಾರೆ.