Advertisement

ಏಷ್ಯಾ ರಾಷ್ಟ್ರಗಳ ಜತೆಗೆ ರೂಪಾಯಿ ವಹಿವಾಟು?

11:05 PM Jan 06, 2023 | Team Udayavani |

ನವದೆಹಲಿ: ದಕ್ಷಿಣ ಏಷ್ಯಾ ದೇಶಗಳೊಂದಿಗಿನ ಭಾರತದ ವ್ಯಾಪಾರ ವಹಿವಾಟು ಸುಲಭಗೊಳಿಸುವ ನಿಟ್ಟಿನಲ್ಲಿ, ಈ ರಾಷ್ಟ್ರಗಳೊಂದಿಗಿನ ವ್ಯವಹಾರವನ್ನು ರೂಪಾಯಿಗಳಲ್ಲೇ ನಡೆಸುವುದರ ಕುರಿತು ಕೇಂದ್ರಸರ್ಕಾರ ಹಾಗೂ ಆರ್‌ಬಿಐ ಮಾತುಕತೆ ನಡೆಸುತ್ತಿವೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಶುಕ್ರವಾರ ತಿಳಿಸಿದ್ದಾರೆ.

Advertisement

ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ಸಮಾವೇಶದಲ್ಲಿ ಈ ವಿಚಾರದ ಕುರಿತು ಮಾಹಿತಿ ನೀಡಿರುವ ಅವರು, ಜಾಗತಿಕ ವ್ಯಾಪಾರ ದೃಷ್ಟಿಕೋನದಿಂದ ದಕ್ಷಿಣ ಏಷ್ಯಾ ರಾಷ್ಟ್ರಗಳು ಪ್ರಾದೇಶಿಕ ವ್ಯವಹಾರಗಳಿಗೆ ಮಾನ್ಯತೆ ನೀಡುವುದು ಅಗತ್ಯವಾಗಿದೆ. ಇದರಿಂದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಈ ಹಿನ್ನೆಲೆ ವ್ಯವಹಾರ ಸುಲಭಗೊಳಿಸಲು ರಾಷ್ಟ್ರಗಳ ನಡುವಿನ ವಹಿವಾಟನ್ನು ರೂಪಾಯಿಗಳಲ್ಲಿ ಇತ್ಯರ್ಥಗೊಳಿಸುವುದು ಉತ್ತಮ ಆಯ್ಕೆ. ಈ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ.

ಜ.25ಕ್ಕೆ ಗ್ರೀನ್‌ ಬಾಂಡ್‌ ಬಿಡುಗಡೆ:
ಪರಿಸರ ಸ್ನೇಹಿ ಮೂಲಸೌಕರ್ಯಗಳ ಸ್ಥಾಪನೆಗಾಗಿ ರೂಪಿಸಿರುವ ಗ್ರೀನ್‌ ಬಾಂಡ್‌ ಯೋಜನೆಯ ಚೊಚ್ಚಲ ಬಾಂಡ್‌ ಅನ್ನು ಜನವರಿ 25 ಹಾಗೂ ಫೆಬ್ರವರಿ 9ರಂದು ಬಿಡುಗಡೆಗೊಳಿಸುವುದಾಗಿ ಆರ್‌ಬಿಐ ತಿಳಿಸಿದೆ. ಜತೆಗೆ ಬಾಂಡ್‌ಗಳು ತಲಾ 8 ಸಾವಿರ ಕೋಟಿ ರೂ, ಮೌಲ್ಯದ್ದಾಗಿವೆ ಎಂದಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next