Advertisement

ಈಶ್ವರಪ್ಪ ಪ್ರಕರಣ ಮುಚ್ಚಿಹಾಕಲು ಸರ್ಕಾರದಿಂದ ಮೊದಲೇ ಪ್ಲಾನ್: ಡಿಕೆಶಿ ಆರೋಪ

02:09 PM Jul 25, 2022 | Team Udayavani |

ಬೆಂಗಳೂರು: ಕೆ.ಎಸ್.ಈಶ್ವರಪ್ಪ ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಮೊದಲೇ ಪ್ಲಾನ್ ಮಾಡಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಪ್ರಕರಣದಲ್ಲಿ ನಾವು ದೊಡ್ಡ ಹೋರಾಟ ಮಾಡುತ್ತೇವೆ. ಕಾನೂನು ತಜ್ಞರ ಜತೆ ಬಿ ರಿಪೋರ್ಟ್, ಪೊಲೀಸರ ತನಿಖೆ ಬಗ್ಗೆ ಚರ್ಚೆ ಮಾಡಿದ್ದೇವೆ. ಬಹಳ ಲೋಪದೋಷಗಳನ್ನು ತನಿಖೆ ವೇಳೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ:ಹಗರಣ- ಬಂಧಿತ ಪಾರ್ಥ ಚಟರ್ಜಿ ಅಕ್ರಮ ಬಯಲಿಗೆ; ನಾಯಿಗಳಿಗೆ ಐಶಾರಾಮಿ ಫ್ಲ್ಯಾಟ್ …

ರಮೇಶ್ ಕುಮಾರ್ ಹೇಳಿಕೆ ಸಂಬಂಧ ಭ್ರಷ್ಟಾಚಾರದ ಚರ್ಚೆಗೆ ಆಹ್ವಾನ ನೀಡಿದ್ದ ಸಿ.ಟಿ ರವಿ ಸವಾಲನ್ನು ಸ್ವೀಕರಿಸಿದ ಶಿವಕುಮಾರ್ ನಾನು ಕೂಡ ಚರ್ಚೆ ನಡೆಸಲು ‌ಸಿದ್ಧನಿದ್ದೇನೆ. ಯಾರ ಜೊತೆ ಡಿಬೇಟ್ ಮಾಡಬೇಕೆಂದು ನಿರ್ಧರಿಸುತ್ತೇವೆ. ಸಿಎಂ, ಮಾಜಿ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ, ಸಿ.ಟಿ ರವಿ ಯಾರ ಜೊತೆ ಚರ್ಚೆ ಮಾಡಬೇಕು. ಅದಕ್ಕೆ ಸಮಯ ಕೊಡುತ್ತೇನೆ. ನಾನು ಹಿಂದೆ ಸರಿಯುವುದಿಲ್ಲ. ಎಲ್ಲಿ, ಯಾವಾಗ ಅಂತ ಹೇಳುತ್ತೇನೆ. ನಮ್ಮ ಮೊದಲ ಆದ್ಯತೆ ಹೋರಾಟಕ್ಕೆ. ಆದಾದ ಬಳಿಕ ನಾನು ಸಮಯ, ಜಾಗದ ಬಗ್ಗೆ ಹೇಳುತ್ತೇನೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next