Advertisement

ಕಾರುಗಳಲ್ಲಿ 6 ಏರ್ ಬ್ಯಾಗ್ ಕಡ್ಡಾಯ ನಿಯಮ ಜಾರಿ ಮುಂದೂಡಿಕೆ; ನೂತನ ದಿನಾಂಕ ಘೋಷಣೆ

04:29 PM Sep 29, 2022 | |

ನವದೆಹಲಿ: ಪ್ರಯಾಣಿಕರ ಸುರಕ್ಷತೆಯ ಹಿನ್ನೆಲೆಯಲ್ಲಿ ಕಾರುಗಳಲ್ಲಿ ಆರು ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ಎಂಬ ಕೇಂದ್ರ ಸರ್ಕಾರದ ನಿಯಮ ಜಾರಿಯನ್ನು ಮುಂದೂಡಿರುವುದಾಗಿ ಗುರುವಾರ (ಸೆಪ್ಟೆಂಬರ್ 29) ತಿಳಿಸಿದೆ.

Advertisement

ಇದನ್ನೂ ಓದಿ:”ಆಪರೇಷನ್ ಗರುಡ”; ಏನಿದು ಸಿಬಿಐನ ಉನ್ನತ ಮಟ್ಟದ ಹೊಸ ಕಾರ್ಯಾಚರಣೆ?

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದು, ಕಾರುಗಳಲ್ಲಿ ಕನಿಷ್ಠ ಆರು ಏರ್ ಬ್ಯಾಗ್ ನಿಯಮ ಕಡ್ಡಾಯ ಎಂಬ ಹೊಸ ಕಾಯ್ದೆ 2023ರ ಅಕ್ಟೋಬರ್ 01ರಿಂದ ಅನ್ವಯವಾಗಲಿದೆ” ಎಂದು ತಿಳಿಸಿದ್ದಾರೆ.

ವಾಹನಗಳಲ್ಲಿ ಸಂಚರಿಸುವಾಗ ಎಲ್ಲಾ ಪ್ರಯಾಣಿಕರ ಸುರಕ್ಷತೆ ಮುಖ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕಾರುಗಳಲ್ಲಿ ಕನಿಷ್ಠ ಆರು ಏರ್ ಬ್ಯಾಗ್ ಗಳು ಇರಬೇಕು ಎಂಬ ನಿಯಮ ಜಾರಿಗೆ ತರಲಾಗುತ್ತಿದೆ ಎಂದು ಗಡ್ಕರಿ ಹೇಳಿದರು.

2022 ಜನವರಿ 14ರಂದು ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ, MI ಶ್ರೇಣಿಯ ಕಾರುಗಳಲ್ಲಿ ಕನಿಷ್ಠ ಆರು ಏರ್ ಬ್ಯಾಗ್ ಅಳವಡಿಕೆ ನಿಯಮ ಅಕ್ಟೋಬರ್ 1ರಿಂದ ಜಾರಿಯಾಗಲಿದೆ ಎಂದು ತಿಳಿಸಿತ್ತು. 6ರಿಂದ 8 ಜನ ಪ್ರಯಾಣಿಕರನ್ನು ಕೊಂಡೊಯ್ಯುವ ಕಾರುಗಳಲ್ಲಿ ಕನಿಷ್ಠ ಆರು ಏರ್ ಬ್ಯಾಗ್ ಅನ್ನು ಅಕ್ಟೋಬರ್ ನಿಂದ ಕಡ್ಡಾಯಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಗಡ್ಕರಿ ಕಳೆದ ತಿಂಗಳು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next