Advertisement

ಪ್ರಮುಖ ಔಷಧಗಳ ದರ ಇಳಿಕೆಗೆ ಒಲವು

01:35 PM Jul 25, 2022 | Team Udayavani |

ನವದೆಹಲಿ: ದೇಶದ ಬಹುತೇಕ ರೋಗಿಗಳಿಗೆ ರಿಲೀಫ್ ನೀಡುವಂತೆ, ಹಲವು ಪ್ರಮುಖ ಔಷಧಗಳ ದರವನ್ನು ಗಣನೀಯವಾಗಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸ್ವಾತಂತ್ರ್ಯೋತ್ಸವದ ದಿನವಾದ ಆ.15ರಂದೇ ಈ ಕುರಿತ ನಿರ್ಧಾರ ಹೊರಬೀಳಲಿದೆ.

Advertisement

ಕ್ಯಾನ್ಸರ್‌, ಮಧುಮೇಹ, ಹೃದ್ರೋಗ ಸಂಬಂಧಿ ಔಷಧಗಳು ಸೇರಿದಂತೆ ಹಲವು ಮೆಡಿಸಿನ್‌ಗಳ ಬೆಲೆಯನ್ನು ಶೇ.70ರವರೆಗೆ ಇಳಿಕೆ ಮಾಡುವ ಪ್ರಸ್ತಾಪ ವನ್ನು ಸಲ್ಲಿಸಲಾಗಿದೆ. ಜತೆಗೆ, ಹೆಚ್ಚು ಬಳಕೆಯಲ್ಲಿರುವ ಔಷಧಗಳನ್ನೂ ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ(ಎನ್‌ಎಲ್‌ಇಎಂ)ಗೆ ಸೇರ್ಪಡೆ ಮಾಡಲು ಚಿಂತನೆ ನಡೆಸಲಾಗಿದೆ. ಇದೇ 26ರಂದು (ಮಂಗಳವಾರ) ಫಾರ್ಮಾ ವಲಯದ ಪ್ರತಿನಿಧಿಗಳೊಂದಿಗೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಸಭೆ ಕರೆದಿದ್ದು, ಔಷಧಗಳ ದರ ಇಳಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಈ ಪಟ್ಟಿಯಲ್ಲಿರುವ 355 ಔಷಧಗಳ ಮಾರಾಟದ ದರಕ್ಕೆ ಮಿತಿ ಹೇರಲಾಗಿದ್ದು, ಇದಕ್ಕೆ ಅನುಗುಣವಾಗಿಯೇ ಮಾರಾಟಗಾರರು ಔಷಧ ಮಾರಬೇಕಾಗುತ್ತದೆ.

ಚಿಂತನೆಗಳೇನು? :

  1. ಕೆಲವು ಪ್ರಮುಖ ಔಷಧಗಳ ದರ ವನ್ನು ಇಳಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸುವುದು
  2. ಅದರಂತೆ, ಇಂಥ ಔಷಧಗಳ ದರಗ ಳನ್ನು ಶೇ.70ರವರೆಗೆ ತಗ್ಗಿಸುವುದು
  3. ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ 2015ಕ್ಕೆ ತಿದ್ದುಪಡಿ ತಂದು, ಹೆಚ್ಚು ಬಳಕೆಯಲ್ಲಿರುವ ಕೆಲವು ಔಷಧಗಳನ್ನು ಈ ಪಟ್ಟಿ ಸೇರಿಸುವುದು
  4. ರೋಗಿಗಳು ದೀರ್ಘಾವಧಿ ಬಳಸುವಂಥ ಔಷಧಗಳ ಮೇಲೆ ಮಾರಾಟಗಾರರು ಹೆಚ್ಚಿನ ಲಾಭ ಇಟ್ಟುಕೊಳ್ಳದಂತೆ ಗರಿಷ್ಠ ದರಕ್ಕೆ ಮಿತಿ ಹೇರುವುದು
Advertisement

Udayavani is now on Telegram. Click here to join our channel and stay updated with the latest news.

Next