Advertisement

ಎಸ್‌ಇಜೆಡ್‌ನ‌ ಎಲ್ಲರಿಗೂ ವರ್ಕ್‌ ಫ್ರಂ ಹೋಂ: ಕೇಂದ್ರ ಸರ್ಕಾರ ನಿರ್ಧಾರ

07:54 PM Sep 14, 2022 | Team Udayavani |

ನವದೆಹಲಿ: ದೇಶದ ಎಂಟು ವಿಶೇಷ ಆರ್ಥಿಕ ವಲಯ(ಎಸ್‌ಇಜೆಡ್‌)ದ ವಿಭಾಗಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿಗೆ ವರ್ಕ್‌ ಫ್ರಂ ಹೋಂ ಸೌಲಭ್ಯ ನೀಡುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

Advertisement

ಈ ನಿರ್ಧಾರದಿಂದ ಸಣ್ಣ ಸಣ್ಣ ನಗರಗಳಲ್ಲೂ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಜು.11ರಂದು ಎಸ್‌ಇಜೆಡ್‌ನ‌ ಶೇ.50 ಸಿಬ್ಬಂದಿಗೆ ಗರಿಷ್ಠ ಒಂದು ವರ್ಷದ ಕಾಲಾವಧಿಗೆ ವರ್ಕ್‌ ಫ್ರಂ ಹೋಂ ಸೌಲಭ್ಯ ಘೋಷಿಸಲಾಗಿತ್ತು. ಆದರೆ ಈ ಸೌಲಭ್ಯವನ್ನು ಶೇ.100 ಸಿಬ್ಬಂದಿಗೆ ವಿಸ್ತರಿಸುವಂತೆ ಸಾಕಷ್ಟು ಮನವಿಗಳು ಬಂದಿರುವ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next