ಲಕ್ನೋ: ಮುಲಾಯಂ ಸಿಂಗ್ ಯಾದವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡುವ ಮೂಲಕ ಕೇಂದ್ರ ಸರಕಾರವು ಅವರ ಸ್ಥಾನಮಾನ ಮತ್ತು ಕೊಡುಗೆಗಳನ್ನು ಅಪಹಾಸ್ಯ ಮಾಡಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಗುರುವಾರ ಹೇಳಿದ್ದು, ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಯಾದವ್ ಅವರಿಗೆ ಬುಧವಾರ ಮರಣೋತ್ತರವಾಗಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣವನ್ನು ಘೋಷಿಸಲಾಗಿತ್ತು.
ಪ್ರಶಸ್ತಿಗೆ ಪ್ರತಿಕ್ರಿಯಿಸಿದ ಎಸ್‌ಪಿ ಶಾಸಕ ಮೌರ್ಯ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿ “ನೇತಾಜಿ ಶ್ರೀ ಮುಲಾಯಂ ಸಿಂಗ್ ಯಾದವ್ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ನೀಡುವ ಮೂಲಕ ಭಾರತ ಸರಕಾರವು ನೇತಾಜಿಯವರ ಘನತೆ, ಕೆಲಸ ಮತ್ತು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಅಪಹಾಸ್ಯ ಮಾಡಿದೆ. ನೇತಾಜಿ ಅವರನ್ನು ಗೌರವಿಸಬೇಕಾದರೆ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕಿತ್ತು. ಎಂದಿದ್ದಾರೆ.
ಇದೇ ರೀತಿಯ ಅಭಿಪ್ರಾಯಗಳನ್ನು ಪಕ್ಷದ ವಕ್ತಾರ ಐ ಪಿ ಸಿಂಗ್ ವ್ಯಕ್ತಪಡಿಸಿದ್ದು,“ಭಾರತ ರತ್ನ, ಅತ್ಯುನ್ನತ ನಾಗರಿಕ ಗೌರವವನ್ನು ಹೊರತುಪಡಿಸಿ, ಮಣ್ಣಿನ ಮಗ ದಿವಂಗತ ಮುಲಾಯಂ ಸಿಂಗ್ ಯಾದವ್ ಅವರಿಗೆ ಯಾವುದೇ ಗೌರವ ಸಿಗುವುದಿಲ್ಲ. ನಮ್ಮ ಗೌರವಾನ್ವಿತ ನೇತಾಜಿಗೆ ಭಾರತ ರತ್ನವನ್ನು ಯಾವುದೇ ವಿಳಂಬವಿಲ್ಲದೆ ನೀಡುವ ಘೋಷಣೆ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.