Advertisement

ಗೋ ಪ್ರೇಮಿಗಳ ಕಾರ್ಯ ಶ್ಲಾಘನೀಯ : ರಾಘವೇಶ್ವರ ಶ್ರೀ

07:07 PM May 22, 2019 | sudhir |

ಕಾಸರಗೋಡು: ಹಲಸು ಎಂದರೆ ಚಿನ್ನವಾಗಿದ್ದು, ಚಿನ್ನಕ್ಕಿಲ್ಲದ ಪರಿಮಳ, ಚಿನ್ನಕ್ಕಿಲ್ಲದ ರುಚಿಯನ್ನು ಅದು ಹೊಂದಿದೆ. ಗೋ ಸೇವೆಗಾಗಿ ತನ್ನ ಶ್ರಮವನ್ನು ಸಮರ್ಪಣೆ ಮಾಡುವ ಮೂಲಕ ಶಿಷ್ಯವೃಂದವು ಗೋರಕ್ಷಣೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಗೋವಿನ ಮೇವಿಗಾಗಿ ಹಲಸಿನ ಮೇಳವನ್ನೇ ಆಯೋಜಿಸಿದ ಗೋ ಪ್ರೇಮಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ತಮ್ಮ ಆಶೀರ್ವಚನ ಸಂದೇಶವನ್ನು ನೀಡಿದರು.

Advertisement

ಕಾಸರಗೋಡು ಸಮೀಪದ ಪೆರಿಯ ಆಲಕ್ಕೋಡ್‌ ವಿಷ್ಣುಪ್ರಸಾದ ಹೆಬ್ಟಾರ್‌ಅವರ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವುಗಳ ಮೇವಿಗಾಗಿ ಜೂನ್‌ 8ರಂದು ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಡೆಯಲಿರುವ “ಹಲಸು ಮೇಳ’ದ ಕರಪತ್ರವನ್ನು ಅವರು ಲೋಕಾರ್ಪಣೆಗೊಳಿಸಿ ಅನುಗ್ರಹಗೈದು ಮಾತನಾಡಿದರು.

ಹಲಸು ಮೇಳ ಕಾರ್ಯಾಗಾರದಲ್ಲಿ ತಯಾರಿಸಿದ ಹಪ್ಪಳದ ಕಟ್ಟುಗಳನ್ನು ಶ್ರೀ ಪೀಠಕ್ಕೆ ಸಮರ್ಪಣೆ ಮಾಡಿ, ಆಶೀರ್ವಾದವನ್ನು ಪಡೆದುಕೊಳ್ಳಲಾಯಿತು. ಪೂಚಕ್ಕಾಡು ವಿಷ್ಣು ಹೆಬ್ಟಾರ್‌ ದಂಪತಿಗಳು, ಹಿರಿಯ ವಕೀಲರಾದ ಶಂಭು ಶರ್ಮ ಬೆಂಗಳೂರು, ಜ್ಞಾನ ಭಾರತಿ ಪ್ರಕಾಶನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್‌ ಪಿ.ಎಸ್‌. ಮತ್ತಿತರರು ಹಪ್ಪಳದ ಕಟ್ಟುಗಳನ್ನು ಖರೀದಿಸಿ ಪುಣ್ಯಕೋಟಿಯ ಸೇವೆಯಲ್ಲಿ ಭಾಗಿಯಾದರು. ಹಲಸು ಮೇಳದ ಸಂಘಟಕ ಡಾ.ವೈ.ವಿ.ಕೃಷ್ಣಮೂರ್ತಿ, ಶಿವಪ್ರಸಾದ ವರ್ಮುಡಿ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಈಶ್ವರಿ ಬೇರ್ಕಡವು, ಕುಸುಮ ಪೆರ್ಮುಖ, ಸುಬ್ರಹ್ಮಣ್ಯ ಭಟ್‌ ಗಬ್ಬಲಡ್ಕ, ವೈ.ಕೆ.ಗೋವಿಂದ ಭಟ್‌, ಗೋವಿಂದ ಬಳ್ಳಮೂಲೆ, ಪ್ರೊ|ಶ್ರೀಕೃಷ್ಣ ಭಟ್‌, ದೇವಕಿ ಪನ್ನೆ, ಕಿರಣಾ ಮೂರ್ತಿ, ಲಕ್ಷಿ$¾à ವಿ.ಭಟ್‌, ಸುಲೋಚನಾ, ಈಶ್ವರ ಭಟ್‌ ಉಳುವಾನ, ವಲಯಗಳ ಪದಾಧಿಕಾರಿಗಳು, ಹಲಸು ಮೇಳದ ಸೇವಾ ಬಿಂದುಗಳು ಉಪಸ್ಥಿತರಿದ್ದರು.

ಬಾಯಿಗೆ ರುಚಿ ದೇಹಕ್ಕೆ ಪುಷ್ಟಿ
ಗೋವಿನ ಸೇವೆಗಾಗಿ ನಾನಾ ರೀತಿಯಲ್ಲಿ ಪ್ರಯತ್ನಿಸಬಹುದು. ಹಲಸಿನ ಮೇಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಲಸಿನ ಉತ್ಪನ್ನಗಳನ್ನು ಖರೀದಿಸುವ ಮೂಲಕ ಗೋ ಸೇವೆಯ ಪುಣ್ಯವನ್ನು ಪಡೆದುಕೊಳ್ಳಬಹುದು. ಬಾಯಿಗೆ ರುಚಿ ದೇಹಕ್ಕೆ ಪುಷ್ಟಿಯನ್ನು ನೀಡುವ ಹಲಸಿನ ಉತ್ಪನ್ನಗಳನ್ನು ಬಳಸಬೇಕು. ಗೋ ಉತ್ಪನ್ನಗಳನ್ನು ತಯಾರಿಸಿದ ಶ್ರಮದ ಫಲವಾಗಿ ಅವರ ಬದುಕು ಚಿನ್ನದ ಬಣ್ಣ, ಚಿನ್ನದ ಪರಿಮಳ, ಚಿನ್ನದ ಸುಗಂಧವನ್ನು ಪಡೆದುಕೊಳ್ಳಲಿ ಎಂದು ಶ್ರೀಗಳು ಆಶೀರ್ವದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next