Advertisement

ವೈದ್ಯಕೀಯ ಆಡಿಟೋರಿಯಮ್‌ಗೆ ನೀಟ್‌ ವಿರೋಧಿ ಹೋರಾಟಗಾರ್ತಿ ಹೆಸರು

10:56 PM Mar 14, 2023 | Team Udayavani |

ಚೆನ್ನೈ: ತಮಿಳುನಾಡು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ ಆರಂಭಿಸಿದ ಆಡಿಟೋರಿಯಮ್‌ಗೆ ರಾಜ್ಯದಲ್ಲಿ ನೀಟ್‌ ಪರೀಕ್ಷೆಯ ವಿರುದ್ಧ ಕಾನೂನು ಹೋರಾಟ ಮಾಡಿ, 6 ವರ್ಷದ ಹಿಂದೆ ಆತ್ಮಹತ್ಯೆಗೆ ಶರಣಾದ ತಮಿಳುನಾಡು ವಿದ್ಯಾರ್ಥಿನಿ ಎಸ್‌.ಅನಿತಾಳ ಹೆಸರನ್ನೇ ನಾಮಕರಣ ಮಾಡಲಾಗಿದೆ.

Advertisement

ಯುವ ಕಲ್ಯಾಣ ಹಾಗೂ ಕ್ರೀಡಾಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್‌ ಅರಿಯಲೂರಿನ ಕಾಲೇಜಿನ ನೂತನ ಆಡಿಟೋರಿಯಮ್‌ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಅನಿತಾಳ ಸಾವು ವೈದ್ಯಕೀಯ ಶಿಕ್ಷಣಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ನೀಟ್‌ ಎನ್ನುವ ಅಸ್ತ್ರ ಬಳಸುವುದು ಎಷ್ಟು ಕ್ರೂರ ಮಾನದಂಡ ಎಂಬುದಕ್ಕೆ ಸಾಕ್ಷಿ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next