ಬೆಂಗಳೂರು: ಆರನೇ ವೇತನ ಆಯೋಗ ಶಿಫಾರಸಿಗೆ ಆಗ್ರಹಿಸಿ ಸಾರಿಗೆ ನೌಕರರು ಇಂದು ಮುಷ್ಕರ ಹೂಡಿದ್ದು, ಯಾವುದೇ ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಗಳು ರಸ್ತೆಗಿಳಿದಿಲ್ಲ. ಸರ್ಕಾರ, ಅಧಿಕಾರಿಗಳ ಮನವಿಗೆ ನೌಕರರು ಸೊಪ್ಪು ಹಾಕದೆ ಇರುವುದರಿಂದ ನೌಕರರಿಗೆ ಶಾಕ್ ನೀಡಲು ಸರ್ಕಾರ ನಿರ್ಧರಿಸಿದೆ.
ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿರುವ ನೌಕರರ ಮಾರ್ಚ್ ತಿಂಗಳ ವೇತನ ತಡೆಯಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ:ಸಾರಿಗೆ ಬಸ್ ಬಂದ್: ವಿಜಯಪುರದಲ್ಲಿ ಖಾಸಗಿ ವಾಹನಗಳ ದರ್ಬಾರ್!
ಪ್ರತಿ ತಿಂಗಳು 10ನೇ ತಾರೀಖಿನೊಳಗೆ ನಿಗಮಗಳು ನೌಕರರಿಗೆ ವೇತನ ನೀಡುತ್ತಿದ್ದವು. ಆದರೆ ಈ ಬಾರಿ ಮುಷ್ಕರ ಕೈಬಿಡುವರಿಗೆ ಸಂಬಳ ನೀಡಬಾರದು ಎಂದು ಸಾರಿಗೆ ನಿಗಮಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ಮುಷ್ಕರದ ಮಧ್ಯೆಯೂ ಬಸ್ ಬಂತು: ಕರ್ತವ್ಯ ಪ್ರಜ್ಞೆ ಮೆರೆದ ಹೊಸಪೇಟೆ ಡಿಪೋ ನೌಕರರು