Advertisement

ಜನರು ಮಾಸ್ಕ್ ಧರಿಸುವುದನ್ನು ಮುಂದುವರಿಸಿದರೆ ಲಾಕ್ ಡೌನ್ ಮಾಡುವುದಿಲ್ಲ; ಕೇಜ್ರಿವಾಲ್

04:18 PM Jan 09, 2022 | Team Udayavani |

ಹೊಸದಿಲ್ಲಿ: ನಗರದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿದ್ದರೂ, ಲಾಕ್‌ಡೌನ್ ಹೇರುವ ಯೋಜನೆಯನ್ನು ತಮ್ಮ ಸರ್ಕಾರ ಹೊಂದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, “ನಾವು ಲಾಕ್‌ಡೌನ್ ಹೇರಲು ಬಯಸುವುದಿಲ್ಲ, ಆದರೆ ಜನರು ಮಾಸ್ಕ್ ಗಳನ್ನು ಧರಿಸಬೇಕು, ನೀವು ಮಾಸ್ಕ್ ಧರಿಸಿದರೆ ನಾವು ಲಾಕ್ ಡೌನ್ ಮಾಡುವುದಿಲ್ಲ” ಎಂದು ಹೇಳಿದರು.

ದೆಹಲಿಯಲ್ಲಿ ಭಾನುವಾರ 22,000 ಕೋವಿಡ್ -19 ಪ್ರಕರಣಗಳು ದಾಖಲಾಗುವ ಸಾಧ್ಯತೆಯಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳು ಆತಂಕಕಾರಿ, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಲೆಫ್ಟಿನೆಂಟ್ ಗರ್ವನರ್ ಸರ್ ಮತ್ತು ನಾನು ಇಡೀ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ನಾಳೆ ಡಿಡಿಎಂಎ ಸಭೆ ಇದೆ. ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದರು.

ಇದನ್ನೂ ಓದಿ:11 ಬಾರಿ ಕೋವಿಡ್ ಲಸಿಕೆ ಪಡೆದ ಅಜ್ಜನ ವಿರುದ್ಧ ಎಫ್ಐಆರ್ ದಾಖಲು!

Advertisement

ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಕೇಂದ್ರ ಸರ್ಕಾರದಿಂದ ನಮಗೆ ಸಂಪೂರ್ಣ ಬೆಂಬಲ ಸಿಗುತ್ತಿದೆ ಎಂದು ಅವರು ಹೇಳಿದರು.

2021ರ ಮೇ 7 ರಂದು ಪ್ರತಿದಿನ 20,000 ಕೋವಿಡ್ ಪ್ರಕರಣಗಳು ಇದ್ದಾಗ 341 ಸಾವುಗಳು ಸಂಭವಿಸಿತ್ತು, ಆದರೆ 2022ರ ಜನವರಿ 8 ರಂದು, ಅಷ್ಟೇ ಸಂಖ್ಯೆಯ ಕೋವಿಡ್ ಪ್ರಕರಣಗಳಿದ್ದರೂ ಕೇವಲ ಏಳು ಸಾವುಗಳು ಸಂಭವಿಸಿವೆ ಎಂದು ಕೇಜ್ರಿವಾಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next