Advertisement
ಸುದ್ದಿಗಾರರ ಜತೆ ಮಾತನಾಡಿ, ಪ್ರವಾಹ ಸಂಕಷ್ಟದ ಬಗ್ಗೆ ಸರ್ಕಾರ ಸಮಂಜಸ ಉತ್ತರ ನೀಡಿಲ್ಲ. ಪಿಎಸ್‌ಐ ಹಗರಣ ಕುರಿತು ಎಡಿಜಿಪಿ ಮಂಪರು ಪರೀಕ್ಷೆ, ನ್ಯಾಯಾಂಗ ತನಿಖೆಗೆ ಒಪ್ಪಲಿಲ್ಲ. ಬಸವರಾಜ ದಡೆಸಗೂರು ಆಡಿಯೋ ಲೀಕ್ ಆಗಿ ನನ್ನದೇ ಧ್ವನಿ ಎಂದು ಒಪ್ಪಿಕೊಂಡರೂ ಸರ್ಕಾರ ಮೌನ ವಹಿಸಿತು ಎಂದು ದೂರಿದರು.
Related Articles
Advertisement
ನಾನು ಅಧಿವೇಶನವನ್ನು ಒಂದು ದಿನ ವಿಸ್ತರಣೆ ಮಾಡಿ, ಸೋಮವಾರ ಅಥವಾ ನಾಳೆ ಈ ವಿಚಾರ ಚರ್ಚೆ ಮಾಡೋಣ ಎಂದು ಹೇಳಿದೆ. ಆದರೆ ಸರ್ಕಾರ ಈ ಯಾವುದಕ್ಕೂ ಸಿದ್ಧವಿಲ್ಲ. ಬಿಜೆಪಿಯವರು ಸಿದ್ದರಾಮಯ್ಯ ಸ್ಕ್ಯಾಮ್ ರಾಮಯ್ಯ ಎಂಬ ಪುಸ್ತಕ ಹೊರತಂದಿದ್ದಾರೆ. ಈ ಪುಸ್ತಕದಲ್ಲಿರುವ ಯಾವುದಾದರೂ ಒಂದು ಆರೋಪವನ್ನು ಅವರು ಹಿಂದಿನ 3 ವರ್ಷಗಳ ಕಾಲ ಸದನದ ಒಳಗೆ ಅಥವಾ ಸದನದ ಹೊರಗೆ ಪ್ರಸ್ತಾಪ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಇದೇ ಕಾರಣಕ್ಕೆ ನಾನು ಬಸವರಾಜ ಬೊಮ್ಮಾಯಿ ಅವರಿಗೆ 2006ರಿಂದ ಈ ವರೆಗಿನ ಸರ್ಕಾರದ ಎಲ್ಲವನ್ನೂ ನ್ಯಾಯಾಂಗ ತನಿಖೆ ಮಾಡಿಸಿ ಎಂದೆ. ಧಮ್ ಇದ್ರೆ ನ್ಯಾಯಾಂಗ ತನಿಖೆ ಮಾಡಿಸಲಿ ನೋಡೋಣ ಎಂದರು.
ಸರ್ಕಾರದ ಹಗರಣ, ಭ್ರಷ್ಟಾಚಾರವನ್ನು ಇಲ್ಲಿಗೇ ಬಿಡಲ್ಲ. ಮತ್ತೆ ಸದನ ಕರೆದರೆ ಶುರು ಮಾಡುತ್ತೇವೆ. ಈಗಾಗಲೇ 40 ಪರ್ಸೆಂಟ್ ಕಮಿಷನ್ ಕುರಿತು ಅಭಿಯಾನ ಆರಂಭ ಮಾಡಿದ್ದೇವೆ. ಜನರ ಬಳಿಗೆ ಹೋಗಿ ಸತ್ಯ ಹೇಳುತ್ತೇವೆ. ಇಂಥಾ ಭ್ರಷ್ಟ ಸರ್ಕಾರ ಇಡೀ ದೇಶದಲ್ಲಿ ಇಲ್ಲ, ನನ್ನ ರಾಜಕೀಯ ಜೀವನದಲ್ಲೂ ನೋಡಿಲ್ಲ.– ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ