ಹೊಸದಿಲ್ಲಿ : ಸರಕಾರವು ಆರ್‌ಬಿಐ ನಿಂದ ಹಾಲಿ ಹಣಕಾಸು ವರ್ಷದಲ್ಲಿ 28,000 ಕೋಟಿ ರೂ.ಗಳ ಮಧ್ಯಾವಧಿ ಲಾಭಾಂಶವನ್ನು (interim dividend) ನಿರೀಕ್ಷಿಸುತ್ತಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಎಸ್ ಸಿ ಗರ್ಗ್ ಇಂದು ಶುಕ್ರವಾರ ಹೇಳಿದರು.
Advertisement
2018-19ರ ಸಾಲಿನಲ್ಲಿ ಸರಕಾರ ಈಗಾಗಲೇ 40,000 ಕೋಟಿ ರೂ.ಗಳ ಆರ್ ಬಿ ಐ ನಿಂದ ಸ್ವೀಕರಿಸಿದೆ ಎಂದು ಗರ್ಗ್ ಬಜೆಟ್ ಸಂವಾದದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸರಕಾರಕ್ಕೆ interim dividend ನೀಡುವ ವಿಷಯವನ್ನು ಆರ್‌ಬಿಐ ನ ಮುಂದಿನ ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಧರಿಸಲಾಗುವುದು ಎಂದು ತಿಳಿದು ಬಂದಿದೆ.