ಹೊಸದಿಲ್ಲಿ : ಸಾಮಾಜಿಕ ಮಾಧ್ಯಮಗಳಲ್ಲಿ ಒಂದಾಗಿರುವ ವಾಟ್ಸಾಪ್ ಮೂಲಕ ಫೇಕ್ ನ್ಯೂಸ್‌ಗಳು ವ್ಯಾಪಕವಾಗಿ ಹರಿದಾಡುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರಕಾರ, ಇದನ್ನು ತಡೆಗಟ್ಟುವ ಮತ್ತು ತಪ್ಪುಗಾರರ ವಿರುದ್ದ ಸೂಕ್ತ ಕಾನೂನು ಕ್ರಮಕೈಗೊಳ್ಳಲು ಅವರನ್ನು ಉತ್ತರದಾಯಿಯನ್ನಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ವಾಟ್ಸಾಪ್ ಸಂಸ್ಥೆಗೆ ಖಡಕ್ ಸೂಚನೆ ನೀಡಿದೆ.
ಇಂಟರ್‌ನೆಟ್‌ನಲ್ಲಿ, ವಿಶೇಷವಾಗಿ ವಾಟ್ಸಾಪ್ ವೇದಿಕೆ ಮೂಲಕ ಫೇಕ್ ನ್ಯೂಸ್, ತಪ್ಪು ಮಾಹಿತಿ, ಅಪಪ್ರಚಾರ ಹರಡಲಾಗುತ್ತಿರುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ; ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಾಟ್ಸಾಪ್ ಗೆ ಆದೇಶಿಸಿದೆ ಎಂದು ಲೋಕಸಭೆಯಲ್ಲಿಂದು ಕೇ,ದ್ರ ಗೃಹ ಸಹಾಯಕ ಸಚಿವ ಹಂಸರಾಜ್ ಆಹಿರ್ ಹೇಳಿದರು.