ಹೊಸದಿಲ್ಲಿ: ಪಂಜಾಬ್‌ನಲ್ಲಿ ನಡೆದ ಉದ್ದೇಶಿತ ಹತ್ಯೆಗಳು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಉಗ್ರರಿಗೆ ಹಣಕಾಸು ನೆರವು ನೀಡಿದ್ದ ಕೆನಡಾ ಮೂಲದ ಆದರ್ಶದೀಪ್ ಸಿಂಗ್ ಗಿಲ್‌ನನ್ನು ಭಯೋತ್ಪಾದಕನೆಂದು ಕೇಂದ್ರ ಸರಕಾರ ಸೋಮವಾರ ಘೋಷಿಸಿದೆ.
Advertisement
ಈ ಕುರಿತು ಕೇಂದ್ರ ಗೃಹ ಸಚಿವಾಲಯ ಪ್ರಕಟನೆ ಹೊರಡಿಸಿದೆ. ಲೂಧಿಯಾನದಲ್ಲಿ ಜನಿಸಿದ, ಕೆನಡಾ ಪ್ರಜೆಯಾಗಿರುವ ಗಿಲ್ ಅಲಿಯಾಸ್ ಆರ್ಶ್ ದಾಲಾ ಗಡಿಯಾಚೆಗಿನ ಭಯೋತ್ಪಾದನೆ ಹಾಗೂ ಮಾದಕವಸ್ತು, ಶಸ್ತ್ರಾಸ್ತ್ರಗಳ ಸಾಗಣೆಯಲ್ಲಿ ಭಾಗಿಯಾಗಿದ್ದಾನೆ. ಅಲ್ಲದೆ ನಿಷೇಧಿತ ಖಲಿಸ್ಥಾನಿ ಉಗ್ರಸಂಘಟನೆಯೊಂದಿಗೆ ಸೇರಿ ಉಗ್ರ ಹದೀìಪ್ ಸಿಂಗ್ ನಿಜ್ಜರ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎನ್ನಲಾಗಿದೆ.