Advertisement

ಮೀನುಗಾರಿಕೆ ಅಭಿವೃದ್ಧಿಗೆ ಸರಕಾರ ಬದ್ಧ: ಯಡಿಯೂರಪ್ಪ

01:54 AM Jan 20, 2021 | Team Udayavani |

ಪಡುಬಿದ್ರಿ: ಮೀನುಗಾರಿಕೆಯ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ. ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುವ ಮೀನುಗಾರಿಕೆಯು ವಿದೇಶೀ ವಿನಿಮಯ ಹಾಗೂ ಉದ್ಯೋಗಾವಕಾಶಗಳಿಗೆ ಹೆಚ್ಚಿನ ಒತ್ತು ನೀಡುವುದಲ್ಲದೆ ರಾಜ್ಯದ ಆರ್ಥಿಕ ಪ್ರಗತಿಗೂ ಕೊಡುಗೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯುಡಿಯೂರಪ್ಪ ಹೇಳಿದರು.

Advertisement

ಅವರು ಹೆಜಮಾಡಿ ಕೋಡಿಯಲ್ಲಿ ಮಂಗಳವಾರ 180.84 ಕೋಟಿ ರೂ.ಗಳ ಕೇಂದ್ರ ಹಾಗೂ ರಾಜ್ಯಗಳ ಸಮಪಾಲಿನ ಯೋಜನೆಯಾದ ಸರ್ವಋತು ಮೀನುಗಾರಿಕಾ ಬಂದರಿಗೆ ಶಂಕುಸ್ಥಾಪನೆಗೈದು, ಮತ್ಸಾéಶ್ರಯ, ಮೀನುಗಾರರ ಸಂಕಷ್ಟ ನಿಧಿ ಹಾಗೂ ಭಾಗ್ಯಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಚೆಕ್‌ ವಿತರಿಸಿ ಮಾತನಾಡಿದರು.

ರಾಜ್ಯವು 320 ಕಿ.ಮೀ. ಕರಾವಳಿ ತೀರ ಮತ್ತು 8 ಸಾವಿರ ಹೆಕ್ಟೇರ್‌ಗೂ ಅಧಿಕ ಹಿನ್ನೀರಿನ ಪ್ರದೇಶ ಹೊಂದಿದ್ದು ದೇಶದಮೀನುಗಾರಿಕಾ ವಲಯಕ್ಕೆ ಗಣನೀಯದೇಣಿಗೆಯನ್ನೀಯುತ್ತಿದೆ. ಶ್ರಮಜೀವಿಗಳಾದ ಮೀನುಗಾರರ ಸುರಕ್ಷೆಗೆ  ಸರಕಾರ ಒತ್ತು ನೀಡುತ್ತಿದೆ. ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ ಉತ್ತಮಪಡಿಸಲು   ಕಾರ್ಯಕ್ರಮಗಳನ್ನು ಅನುಷ್ಠಾನಿಸುತ್ತಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಹೆಜ ಮಾಡಿಯ ಬಂದರು ಕಾರ್ಯಗತವಾ ದಾಗ ಮಲ್ಪೆಯಲ್ಲಿ ಬೋಟುಗಳ ದಟ್ಟಣೆ ಕಡಿಮೆಯಾಗಲಿದೆ. ಮುಂದೆ ಕೋಡಿ ಕನ್ಯಾಣ, ಹಂಗಾರಕಟ್ಟೆ, ಮಲ್ಪೆ ಬಂದರು ಗಳ ಅಭಿವೃದ್ಧಿ  ಆಗಬೇಕು ಎಂದರು.

ಜೀವನ ಸುಧಾರಣೆ :

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಮಾತನಾಡಿ, ಹೆಜಮಾಡಿ ಬಂದರು ಕಾರ್ಯಗತಗೊಳ್ಳುವುದ ರೊಂದಿಗೆ ಮೀನುಗಾರರ, ಕಾಪು ಕ್ಷೇತ್ರದ ಜನರ ಜೀವನ ಸ್ಥಿತಿಗತಿ ಸುಧಾರಿಸಲಿದೆ ಎಂದು ಹೇಳಿದರು.

ತತ್‌ಕ್ಷಣ ಮಂಜೂರಾತಿ :

ಬಂದರು ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆ ಗೈದು, ಮೀನುಗಾರರ ಪರ ಕಾಳಜಿ ಹೊಂದಿರುವ ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲಿ ಪ್ರಸ್ತಾವನೆಯಾದ ಕ್ಷಣವೇ ಈ ಬಂದರು ಯೋಜನೆಗೆ ಮಂಜೂ ರಾತಿ ನೀಡಿ ಪ್ರೋತ್ಸಾಹ ನೀಡಿ ದ್ದಾರೆ ಎಂದು ಹೇಳಿದರು.

ಡಾ| ಜಿ. ಶಂಕರ್‌ ಅವರು ಮೊಗವೀರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಿ ಅವರನ್ನು ಮೀನುಗಾರರ ಪರವಾಗಿ ಗೌರವಿಸಿದರು.

ಶಾಸಕರಾದ ರಘುಪತಿ ಭಟ್‌, ಉಮಾನಾಥ ಕೋಟ್ಯಾನ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕೃಷಿ ಸ್ಥಾಯೀ ಸಮಿತಿ ಅಧ್ಯಕ್ಷ ಸುಮಿತ್‌ ಶೆಟ್ಟಿ, ಸದಸ್ಯ ಶಶಿಕಾಂತ್‌ ಪಡುಬಿದ್ರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಜೀವರಾಜ್‌, ಕಾಪು ತಾ.ಪಂ. ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಸದಸ್ಯೆ ರೇಣುಕಾ ಪುತ್ರನ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಜಿ.ಪಂ. ಸಿಇಒ ಡಾ| ವೈ. ನವೀನ್‌ ಭಟ್‌, ಮೀನುಗಾರಿಕಾ ನಿರ್ದೇಶಕ ರಾಮಾಚಾರ್ಯ, ಮೀನುಗಾ ರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ದ.ಕ., ಉಡುಪಿ ಸಹಕಾರಿ ಮೀನು ಮಾರಾಟ ಮಹಾ ಮಂಡಲದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮೀನುಗಾರ ಮುಖಂಡ ಡಾ| ಜಿ. ಶಂಕರ್‌, ಆನಂದ ಸಿ. ಕುಂದರ್‌, ಸದಾಶಿವ ಕೋಟ್ಯಾನ್‌ ಉಪಸ್ಥಿತರಿದ್ದರು.

ಕೃಷಿ ಹಾಗೂ ಮೀನುಗಾರಿಕಾ ಇಲಾ ಖೆಯ ಮುಖ್ಯ ಅಪರ ಕಾರ್ಯದರ್ಶಿ ಡಾ| ಜಿ. ಕಲ್ಪನಾ ಸ್ವಾಗತಿಸಿದರು. ನಾಗರಾಜ್‌ ಜಿ.ಎಸ್‌. ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next