ಗಂಗಾವತಿ: ತಾಲೂಕಿನ ಆನೆಗೊಂದಿ ಗ್ರಾಮದ ವಾಲೀಕಿಲ್ಲಾ ಆದಿಶಕ್ತಿ ಶ್ರೀ ದುರ್ಗಾಪರಮೇಶ್ವರಿ ಗೋಶಾಲೆಗೆ ಸರ್ಕಾರದಿಂದ ಮೂಲಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಆನೆಗೊಂದಿಯ ಆದಿಶಕ್ತಿ ದೇಗುಲದ ಶ್ರೀ ಬ್ರಹ್ಮಯ್ಯ ಸ್ವಾಮಿ ಮತ್ತು ಶಾಸಕ ಪರಣ್ಣ ಮನವಳ್ಳಿ ಅವರಿಂದ ಸನ್ಮಾನ ಸ್ವೀಕರಿಸಿ, ಮನವಿ ಸ್ವೀಕರಿಸಿ ಬಳಿಕ ಮಾತನಾಡಿದರು.
ದುರ್ಗಾದೇವಿ ಗೋಶಾಲೆಯನ್ನು ಇನ್ನು ಮುಂದೆ ಸರ್ಕಾರ ನೋಡಿಕೊಳ್ಳಲಿದೆ. ಇಲ್ಲಿ 500ಕ್ಕೂ ಹೆಚ್ಚು ಗೋವುಗಳಿದ್ದು, ಅವುಗಳಿಗೆ ಮೇವು, ನೀರು ಕೊರತೆಯಾಗದಂತೆ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಈ ಬಗ್ಗೆ ಶಾಸಕ ಪರಣ್ಣ ಮುನವಳ್ಳಿ ಹಲವು ಬಾರಿ ಮನವಿ ಮಾಡಿದ್ದು, ಸೂಕ್ತ ಸ್ಥಳ ಸಿಕ್ಕಿದ ಬಳಿಕ, ಶಾಶ್ವತ ಗೋಶಾಲೆ ನಿರ್ಮಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆನೆಗುಂದಿ ಆದಿಶಕ್ತಿ ದೇವಾಲಯದ ಬ್ರಹ್ಮಯ್ಯ ಸ್ವಾಮಿ ಮತ್ತು ಶಾಸಕ ಪರಣಮನವಳ್ಳಿ ಸೇರಿದಂತೆ ಗಂಗಾವತಿಯ ಬಿಜೆಪಿ ಮತ್ತು ಆರ್.ಎಸ್.ಎಸ್. ಮುಖಂಡರು ಇದ್ದರು.